ವಿದ್ಯುತ್ ಅವಘಡ: ಪರಿಹಾರ ನೀಡುವಂತೆ ಆಗ್ರಹ

0
0
loading...

ವಿದ್ಯುತ್ ಅವಘಡ: ಪರಿಹಾರ ನೀಡುವಂತೆ ಆಗ್ರಹ
ಕನ್ನಡಮ್ಮ ಸುದ್ದಿ- ಬೆಳಗಾವಿ: ೨೦೧೩ರಲ್ಲಿ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ವೇಳೆ ಆಕಸ್ಮಿಕ್ ವಿದ್ಯುತ್ ಅವಘಡದಿಂದ ವೈದ್ಯರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕರಿಗೆ ಬದುಕಿಗೆ ಭದ್ರತೆ ಹಾಗೂ ಸಣ್ಣ ಕೆಲಸವನ್ನು ಒದಗೊಸಿಕೊಡಬೇಕೆಂದು ಆಗ್ರಹಿಸಿ ನಗರ ಸೇವಕಿ ಸರಳಾ ಹೇರೆಕರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಐದು ವರ್ಷಗಳ ಹಿಂದೆ ವಾರ್ಡ್ ನಂ.೪೧ ಸದಾಶಿವನಗರದಲ್ಲಿ ವಿದ್ಯುತ್ ಅವಘಡದಿಂದ ನಾಲ್ವರು ಸಾವನ್ನಪ್ಪಿದ್ದು, ೬ ಮಂದಿ ಮಾರಣಾಂತಿಕ ಗಾಯಗೊಂಡಿದ್ದರು. ಘಟನೆ ದಿನ ಘೋಷಣೆಯಾದ ಚಿಕಿತ್ಸಾ ವೆಚ್ಚ ಬಿಟ್ಟರೆ ಇಲ್ಲಿಯವರೆ ಸರಕಾರದಿಂದ ಯಾವುದೇ ಪರಿಹಾರ ನೀಡಿಲ್ಲ. ಅಲ್ಲದೆ ಈಗಲೂ ಸಹ ವೈದ್ಯರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂದು ಹೆಸ್ಕಾ ಘೋಷಿಸಿದ ೪೦ ಸಾವಿರ ಹಣವು ದೊರತ್ತಿಲ್ಲ. ಆದ್ದರಿಂದ ಯುವಕರಿಗೆ ಹಣದ ಜೊತೆಗೆ ಅಂಗವಿಕಲ ಪಿಂಚಣಿ ಹಾಗೂ ಪುಟ್ಟ ಕೆಲಸ ಕೊಡಬೇಕೆಂದು ಮನವಿಯಲ್ಲಿ ತಿಳಿಸಿದರು.
ಇದೇ ವೇಳೆ ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕರಿಗೆ ಸಂಬಳ, ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವಾರು ತೊಂದರೆ ಇವೆ ಆದರೆ ಪಾಲಿಕೆ ಸದಸ್ಯರು ಇಷ್ಟೆÃಲ್ಲ ಸಮಸ್ಯೆಗಳಿಂದ್ದರು, ಶಿಮ್ಲಾ ಪ್ರವಾಸಕ್ಕೆ ಹಮ್ಮಿಕೊಂಡಿದ್ದಾರೆ. ಆದ್ದರಿಂದ ಅದನ್ನು ರದ್ದುಗೊಳಿಸಿ ಅದೇ ಹಣದಲ್ಲಿ ಕೊಡುಗಿನ ನಿರಾಶ್ರಿತರಿಗೆ ಧನ ಸಹಾಯವಾಗಿ ನೀಡಬೇಕೆಂದು ನಗರ ಸೇವಕಿ ಸರಳಾ ಹೇರೆಕರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಚಿನ ಕುರವ, ಸೊಮೇಶ ಮಡಿವಾಳ, ಸಂತೋಷ ಕಾಳಿ, ಅಪ್ಪಾಜಿ ರಾಣಿ ಕೊಳ್ಳಿ, ಬಸವರಾಜ ,ಅಪ್ಪಾಜಿ ಬತಾಕಾಂಡೆ ಸೇರಿದಂತೆ ಇತರರು ಇದ್ದರು.

loading...