ವಿವಿಧ ಸಂಘಟನೆಗಳಿಂದ ಭಾರತ ಬಂದ್‌ಗೆ ಬೆಂಬಲ

0
0
loading...

ಕನ್ನಡಮ್ಮ ಸುದ್ದಿ: ಬಸವನಬಾಗೇವಾಡಿ: ಭಾರತ ದೇಶ್ಯಾಧ್ಯಾಂತ ಪೆಟ್ರೊÃಲ್ ಹಾಗೂ ಡಿಸೇಲ್ ದರ ಏರಿಕೆ ಖಂಡಿಸಿ ಸೋಮವಾರ ಕರೆ ನೀಡಿದ್ದ ಭಾರತ ಬಂದ್ ಹಿನ್ನಲೆಯಲ್ಲಿ ಪಟ್ಟಣÀದಲ್ಲಿ ಬ್ಲಾಕ್ ಕಾಂಗ್ರೆÃಸ್ ಕಮೀಟಿ ಸದಸ್ಯರು ಬೆಂಬಲಿಸಿ ತಹಶೀಲದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಬಸವೇಶ್ವರ ವೃತ್ತದಲ್ಲಿ ಕಾಂಗ್ರೆÃಸ್ ಬೆಂಬಲಿಗರು ಮೋದಿ ಸರ್ಕಾರದ ವಿರುದ್ಧ ದಿPಕ್ಕಾರ ಕೂಗುತ್ತಾ, ಮಾನವ ಸರಪಳಿ ಮೂಲಕ ಬೆಂಬಲ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅರ್ಧ ಗಂಟೆಗಳ ಕಾಲ ವಾಹನ ಸಂಚಾರ ಹಾಗೂ ಸಾರ್ವಜನಿಕರಿಗೆ ತೊಂದರೆಯಾಯಿತು. ಈ ಸಂದರ್ಭದಲ್ಲಿ ರಾಷ್ಟಿÃಯ ಬಸವ ಸೈನ್ಯದ ಅಧ್ಯಕ್ಷ ಶಂಕರಗೌಡ ಬಿರಾದಾರ ಮಾತನಾಡಿ, ಭಾಜಪ ಪಕ್ಷದ ಸಾಧನೆ ಶೂನ್ಯವಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಭಾಜಪವನ್ನು ಸಂಪೂರ್ಣವಾಗಿ ದೇಶದಿಂದ ಹೊರ ಹಾಕುವುದೇ ನಮ್ಮ ಉದ್ಧೆÃಶವಾಗಿದೆ. ದೇಶದ ಜನತೆಯ ಹಾಗೂ ಆರ್ಥಿಕತೆಯ ಮೇಲೆ ತೈಲ ಬೆಲೆಯನ್ನು ಏರಿಸಿ ಮೋಸ ಮಾಡುತ್ತಿದ್ದು, ಇದರಿಂದ ದೇಶದ ಮೇಲೆ ವ್ಯತಿರಿಕ್ತ ¥ರಿಣಾಮ ಬೀರುತ್ತಿದೆ ಎಂದರು.
ಮಾಜಿ ಪುರಸಭೆ ಅಧ್ಯಕ್ಷ ಸಂಜೀವ ಕಲ್ಯಾಣಿ ಮಾತನಾಡಿ, ಕೂಡಲೇ ಕೇಂದ್ರ ಸರ್ಕಾರ ತೈಲ ದರವನ್ನು ಇಳಿಸಬೇಕು ಇಲ್ಲದಿದ್ದರೆ ನರೇಂದ್ರ ಮೋದಿ ಅವರು ಪಿಎಂ ಸ್ಥಾನಕ್ಕೆü ರಾಜೀನಾಮೆ ನೀಡಬೇಕು ಎಂದರು. ಕೋಲ್ಲಾರ ಬ್ಲಾಕ್ ಕಾಂಗ್ರೆÃಸ್ ಅಧ್ಯಕ್ಷ ರಫೀಕ್ ಪಕಾರಿ ಹಾಗೂ ಕಾಂಗ್ರೆÃಸ್ ಪ್ರದಾನ ಕರ‍್ಯದರ್ಶಿ ವಕೀಲ ರವಿ ರಾಠೋಡ ಮಾತನಾಡಿದರು. ಬಸವರಾಜ ತುಂಬಗಿ, ನಿಸಾರ ಚೌಧರಿ, ಹನೀಪ ಮಖಾನದಾರ, ನಜೀರ ಗಣಿ, ರವಿ ಚಿಕ್ಕೊಂಡ, ಯುವರಾಜ ಲಮಾಣಿ, ಬಸ್ಸು ಚೌರಿ, ಮುತ್ತು ಉಕ್ಕಲಿ, ಮುತ್ತು ಪತ್ತಾರ, ಕಾಶಿನಾಥ ರಾಠೋಡ, ಸಿದ್ರಾಮ ಪಾತ್ರೊÃಟ, ಲಾಳೆಸಾ ಕೊರಬು, ಮಶಾಕ ಮುಲ್ಲಾ, ಜಟ್ಟು ಮಾಲಗಾರ ಸೇರಿದಂತೆ ಅನೇಕರು ಇದ್ದರು.
ವಿವಿಧ ಸಂಘಟನೆಗಳಿಂದ ಬೆಂಬಲ: ತಾಲೂಕಾ ವಕೀಲರ ಸಂಘದ ವತಿಯಿಂದ ವಕೀಲರು ನ್ಯಾಯಾಲಯ ಕಲಾಪದಿಂದ ಹೊರಗಿಳಿದು ಬೆಂಬಲ ವ್ಯಕ್ತಪಡಿಸಿದರು. ತಾಲೂಕಾ ಟಿಪ್ಪು ಕ್ರಾಂತಿ ಸೇನೆಯ ಸದಸ್ಯರು À ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತೈಲ ಬೆಲೆ ಏರಿಕೆ ಖಂಡಿಸಿ ದಿಕ್ಕಾರ ಕೂಗೂತ್ತಾ ಬಸವೇಶ್ವರ ವೃತ್ತದಲ್ಲಿ ತಹಶೀಲದಾರ ಮೂಲಕ ರಾಷ್ಟಪತಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕಾ ಅಧ್ಯಕ್ಷ ಖಾಜಂಬರ್ ನದಾಫ್, ಜಿಲ್ಲಾ ಕರ‍್ಯದರ್ಶಿ ರಂಜಾನ್ ಹೆಬ್ಬಾಳ, ಹುಸೇನಸಾಬ ಬೈರವಾಡಗಿ, ಸುರೇಶ ಮಣ್ಣೂರ, , ನಾಸೀರ ತಾಂಬೂಳಿ, ಶರೀಫ ಉಳ್ಳಾಗಡ್ಡಿ ಸೇರಿದಂತೆ ಅನೇಕರು ಇದ್ದರು.
ಬಂದ್ ಹಿನ್ನಲೆ ಸಾರ್ವಜನಿಕರಿಗೆ ತೊಂದರೆ: ಭಾರತ ಬಂದ್ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಸರ್ಕಾರಿ ಬಸ್ ಗಳು ಓಡಾಡದ ಹಿನ್ನಲೆಯಲ್ಲಿ ಪ್ರಯಾಣಿಕರು ಖಾಸಗಿ ವಾಹನಗಳಿಗೆ ಮೊರೆ ಹೋಗಬೇಕಾಯಿತು. ಹೀಗಾಗಿ ದೂರದ ಊರುಗಳಿಗೆ ಹೋಗುವ ಜನರಿಗೆ ತೀವ್ರ ತೊಂದರೆಯಾಯಿತು. ಬಂದ್ ಹಿನ್ನಲೆಯಲ್ಲಿ ಅಂಗಡು ಮುಂಗಟ್ಟುಗಳು ಎಂದಿನಂತೆ ವ್ಯಾಪಾರ ವಹಿವಾಟು ನಡೆಸಿದವು.

loading...