ವಿವೇಕಾನಂದರ ಚಿಕ್ಯಾಗೋ ಭಾಷಣ ಸರ್ವರಿಗೂ ಸ್ಫೂರ್ತಿ

0
0
loading...

ಕನ್ನಡಮ್ಮ ಸುದ್ದಿ-ಧಾರವಾಡ: ಅಧ್ಯಾಪಕರ ತರಗತಿ ಬೋಧನೆ ಹೆಚ್ಚು ಕ್ರಿಯಾಶೀಲಗೊಳ್ಳಲು ನಿತ್ಯವೂ ಹೊಸ ಓದನ್ನು ಸಮಸ್ತ ಬೋಧಕ ಬಳಗ ರೂಢಿಸಿಕೊಳ್ಳಬೇಕು ಎಂದು ಶಹರ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಓ) ಎ.ಎ. ಖಾಜಿ ಹೇಳಿದರು.
ಡಯಟ್ ಸಂಲಗ್ನ ಸಂಸ್ಥೆ ಡಾ.ಎಚ್.ಎಫ್. ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ ಸ್ಥಳೀಯ ಕವಿವಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಚಿಕ್ಯಾಗೋ ಉಪನ್ಯಾಸದ 125ನೆಯ ವರ್ಷಾಚರಣೆ ಹಾಗೂ ಎಂ.ಎಚ್. ನಾಯಕ ಜನ್ಮ ಶತಮಾನೋತ್ಸವ ಹಾಗೂ ಅಚ್ಯುತನಿಧಿ ಪುಸ್ತಕ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪುಸ್ತಕ ಪ್ರೀತಿಯ ಜೊತೆಗೆ ಶಿಕ್ಷಕರಲ್ಲಿ ನಿರಂತರ ಅಧ್ಯಯನ ಅಗತ್ಯವಾಗಿದೆ ಎಂದರು. ಕವಿವಿ ಶಿಕ್ಷಣ ಮಹಾವಿದ್ಯಾಲಯದ ಪ್ರಿನ್ಸಿಪಾಲ್ ಡಾ. ಪ್ರಭಾ ಗುಡ್ಡದಾನ್ವೇರಿ ಮಾತನಾಡಿ, ಸ್ವಾಮಿ ವಿವೇಕಾನಂದರ ಬದುಕು, ಬರಹ, ಮಾತುಗಾರಿಕೆಯ ತತ್ವಾದÀರ್ಶಗಳು ಇಂದು ವಿಶ್ವವ್ಯಾಪಿಯಾಗಿವೆÉ. ಅಖಂಡ ಮನುಕುಲವು ಸರ್ವಧರ್ಮ ಸಮನ್ವಯ ಹಾಗೂ ಭಾವೈಕ್ಯದ ಬದುಕನ್ನು ಹೊಂದುವಲ್ಲಿ ಸ್ವಾಮಿ ವಿವೇಕಾನಂದರ ಚಿಕ್ಯಾಗೋ ಭಾಷಣ ಒಂದು ಸ್ಫೂರ್ತಿಯಾಗಿದೆ ಎಂದರು. ಬಿ.ಇಡಿ. ವಿದ್ಯಾರ್ಥಿ ಶರಣಪ್ಪ ಗೌಡರ ವಿವೇಕಾನಂದರ ಚಿಕ್ಯಾಗೋ ಉಪನ್ಯಾಸ ಕುರಿತು ಮಾತನಾಡಿದರು. ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕರುಗಳಾದ ಡಾ.ಶಹತಾಜ ಬೇಗಂ, ರಮೇಶ ನಾಯಕ ಹಾಗೂ ಸುರೇಶ ಸಮ್ಮಸಗಿ, ಕಟ್ಟಿಮನಿ ಪ್ರತಿಷ್ಠಾನದ ಸಹ ಕಾರ್ಯದರ್ಶಿ ವ. ಜಯಶ್ರೀ ಇದ್ದರು. ಬಸವರಾಜ ಬಿರಾದಾರ ಸ್ವಾಗತಿಸಿದರು. ನಾಗವೇಣಿ ಪಾಟೀಲ ನಿರೂಪಿಸಿದರು. ಎಂ. ಶಶಿಧರ ವಂದಿಸಿದರು.

loading...