ಶ್ರಾವಣ ಮಾಸ ಎಲ್ಲಾ ಮಾಸಗಳಲ್ಲಿ ಪವಿತ್ರ: ಎಚ್.ಆರ್.ನಿರಾಣಿ

0
0
loading...

ಬೀಳಗಿ: ಶ್ರಾವಣ ಮಾಸ ಎಲ್ಲಾ ಮಾಸಗಳಲ್ಲಿಪವಿತ್ರವಾದ್ದು ಶ್ರಾವÀಣ ಮಾಸದಲ್ಲಿ ಶ್ರಾವÀಣ ಮಾಡಬೇಕು ಅಂದರೆ ಪೂಜ್ಯರ ವಾಣಿ, ಶರಣರ ಚರಿತ್ರೆ ಕೇಳಬೇಕೆಂದು ವಿಧಾನ ಪರಿಷತ್ ಸದ್ಯಸ ಎಚ್.ಆರ್.ನಿರಾಣಿ ಅಭಿಪ್ರಾಯಪಟ್ಟರು.
ತಾಲೂಕಿನ ಕುಂದರಗಿ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ನಡೆದ ರಾಮಲಿಂಗೇಶ್ವರ ಸೇವಾ ಸಮಿತಿ ವತಿಯಿಂದ ಸುಕ್ಷೆÃತ್ರ ಗುಡ್ಡಾಪುರ ದ್ಯಾನಮ್ಮದೇವಿ ಪುರಾಣ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳಿಗೆ ಒಳ್ಳಯ ಸಂಸ್ಕಾರ ನೀಡಿ ಅವರಲ್ಲಿ ಭಗ್ವದ್ಗಿÃತೆ ಪಾರಾಯಣ ಮಾಡುವ ಪ್ರವೃತಿ ಬೆಳೆಸಬೇಕು. ಗುರುವಿನಲ್ಲಿ ಮತ್ತು ತಾಯಿ ತಂದೆಯಲ್ಲಿ ಶ್ರದ್ಧೆಯಿಂದ ನಡೆದುಕೊಳ್ಳುವ ಜ್ಞಾನ ನೀಡಬೇಕು ಎಂದರು.
ದಿವ್ಯಸಾನಿದ್ಯ ವಹಿಸಿ ವಿಶ್ವನಾಥ ದೇವರು ಚರಂತಿಮಠ ಮಾತನಾಡಿ ಮನುಷ್ಯನ ಜೀವನ ಸುಂದರವಾಗಿ ಇರಬೇಕಾದರೆ ಪ್ರತಿಯೂಬ್ಬರು ದೇವರ ನಾಮಸ್ಮರಣೆ ಮಾಡಿದರೆ ಮನಸ್ಸಿಗೆ ಸುಖ ಶಾಂತಿ ನೆಮ್ಮದಿ ಸಿಗುತ್ತದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಿ ಎಂದರು.

ವಿಶ್ವನಾಥ ಚರಂತಿಮಠ.ಮಲ್ಲಯ್ಯ ಜಡಿಮಠ. ರಮೇಶ ಅಂಬಿಗೇರ ಸುಭಾಸ ತೂಗರಿ ಸೇರಿದಂತೆ ಅನೇಕರು ಇದ್ದರು. ಬಸವರಾಜ ದಾವಣಗೇರಿ ಸ್ವಾಗತಿಸಿ. ಬಸವರಾಜ ನಿರಾಕಾರಿ ನಿರೂಪಿಸಿದರು.

loading...