ಸಂಘಗಳ ಬಲವರ್ಧನಗೆ ಎಲ್ಲರ ಸಹಕಾರ ಅಗತ್ಯ: ವೇದಮೂರ್ತಿ

0
0
loading...

ಕನ್ನಡಮ್ಮ ಸುದ್ದಿ-ಹಿರೇಕೆರೂರ: ಸಂಘಟನೆಯಲ್ಲಿ ಶಕ್ತಿಯಿದ್ದು, ಇದನ್ನು ಜಿಲ್ಲೆಯಲ್ಲಿ ಮತ್ತಷ್ಟು ಬಲಪಡಿಸಿಕೊಂಡು ಕ್ರಿಯಾತ್ಮಕ ಚಟುವಟಿಕೆಗಳನ್ನು ಮಾಡುವ ಮೂಲಕ ರಾಜ್ಯದಲ್ಲಿ ಮಾದರಿ ಸಂಘವನ್ನಾಗಿಸಲು ಎಲ್ಲರ ಸಹಾಯ ಸಹಕಾರ ಅತಿ ಅಗತ್ಯವಾಗಿದೆ ಎಂದು ಹಾವೇರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಸ್‌.ಟಿ.ವೇದಮೂರ್ತಿ ಹೇಳಿದರು.
ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಜರುಗಿದ ಸಂಘದ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆ ಮತ್ತು ತಾಲೂಕುಗಳಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ನಿಯಮಾವಳಿಗಳ ವಿರುದ್ದ ನಡೆದುಕೊಂಡರೆ, ಅವರನ್ನು ಕೂಡಲೆ ಸಂಘದ ಸದಸ್ಯತ್ವದಿಂದ ತಗೆದು ಹಾಕಲಾಗುವುದು ಹಾಗೂ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮಕೈಗೊಳ್ಳಲಾಗುವುದು. ಸಂಘದಿಂದ ಮಹತ್ವ ಕ್ರೀಯಾತ್ಮಕ ಚಟುವಟಿಕೆಗಳನ್ನು ಮಾಡುವ ಉದ್ಧೇಶ ಹೊಂದಿದ್ದು, ಕಾನಿಪ ಪತ್ರಕರ್ತರ ಸಂಘದ ಸದಸ್ಯರು ಇದಕ್ಕೆ ಕೈಜೋಡಿಸಬೇಕು. ಮುಂಬರುವ ದಿನಗಳಲ್ಲಿ ಜಿಲ್ಲಾ ಸಂಘದ ಪದಗ್ರಹಣ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು ಎಂದರು.
ಇದೆ ವೇಳೆ ಕೊಡಗಿನಲ್ಲಿ ಅತಿವೃಷ್ಟಿಯಿಂದ ಮನೆ ಕಳೆದುಕೊಂಡು ನಿರಾಶ್ರಿತರಾದ 8 ಜನ ಪತ್ರಕರ್ತರಿಗೆ ಮನೆ ನಿರ್ಮಿಸಲು ಸಹಾಯಸ್ತವಾಗಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ 15 ಸಾವಿರ ಹಣವನ್ನು ಸಂಗ್ರಹಿಸಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರ ಪರಿಹಾರ ನಿಧಿಗೆ ನೀಡಲಾಯಿತು.
ನಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಸ್‌.ಟಿ.ವೇದಮೂರ್ತಿ ಹಾಗೂ ಪ್ರಧಾನ ಕಾರ್ಯದರ್ಶಿ ರಾಮು ಮುದಿಗೌಡ್ರ ಅವರನ್ನು ಸಂಘದಿಂದ ಸನ್ಮಾನಿಸಲಾಯಿತು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇಂದುಧರ ಹಳಕಟ್ಟಿ ಅಧ್ಯಕ್ಷತೆ ವಹಿಸಿದ್ದರು.
ರಾಣೆಬೆನ್ನೂರಿನ ಹಿರಿಯ ಪತ್ರಕರ್ತ ಮನೋಹರ ಮಲ್ಲಾಡದ, ತಾಲೂಕು ಕಾನಿಪ ಉಪಾಧ್ಯಕ್ಷ ಮಲ್ಲೀಕಾರ್ಜುನ ಅಬಲೂರ, ಗೌರವಾಧ್ಯಕ್ಷ ರವಿ ಮೇಗಳಮನಿ, ಕಾರ್ಯದರ್ಶಿ ಪ್ರವೀಣಗೌಡ ಗೌಡರ, ಖಜಾಂಚಿ ವಿಜಯಕುಮಾರ ಮುದಿಗೌಡ್ರ, ಸತೀಶ ಆರಿಕಟ್ಟಿ, ಬಸವರಾಜ ನಡುವಿನಕೆರಿ, ಅಬ್ದುಲ್‌ರಶಿದ್‌ ಅಕ್ಕಿ ಇದ್ದರು.

loading...