ಸಂತ್ರಸ್ತರಿಗೆ ಸಹಾಯ ನಿಧಿ ರವಾನೆ

0
0
loading...

ಸಂತ್ರಸ್ತರಿಗೆ ಸಹಾಯ ನಿಧಿ ರವಾನೆ
ಬೈಲಹೊಂಗಲ: ಈಚೆಗೆ ಪ್ರಕೃತಿ ವಿಕೋಪಕ್ಕೆ ತುತ್ತಾದ ಕೊಡಗು ಜನತೆಯ ಜೀವನೋಪಾಯಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸುಕ್ಷೆÃತ್ರ ಇಂಚಲದ ಶ್ರಿÃ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಎಲ್ಲ ಅಂಗಸಂಸ್ಥೆಗಳ ನೌಕರರ ಒಂದು ದಿನದ ವೇತನ ಹಾಗೂ ಶ್ರಿÃಮಠದ ವತಿಯಿಂದ ಒಟ್ಟು ಹಣ ರೂ.೧,೫೧,೦೦೦/- ಗಳನ್ನು ಶ್ರಿÃಮಠದ ಡಾ: ಶಿವಾನಂದ ಭಾರತಿ ಸ್ವಾಮೀಜಿ, ಶಾಸಕ ಮಹಾಂತೇಶ ಕೌಜಲಗಿ, ಇವರ ನೇತೃತ್ವದಲ್ಲಿ ಬೈಲಹೊಂಗಲದ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯ ಬಸವರಾಜ ಜನ್ಮಟ್ಟಿ, ಶ್ರಿÃ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಚೇರನಮನ್ನ್ರ ಡಿ.ಬಿ.ಮಲ್ಲೂರ, ಮಾಜಿ ಚೇರಮನ್ನ ಎಸ್.ಎಂ.ರಾಹುತನವರ, ಗೌರವ ಕಾರ್ಯದರ್ಶಿ ಎಸ್.ಎನ್.ಕೊಳ್ಳಿ, ಶಿಕ್ಷಣ ಸಂಸ್ಥೆಯ ಎಲ್ಲ ಅಂಗಸಂಸ್ಥೆಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗ ಇದ್ದರು.

loading...