ಸಮಸ್ಯೆಗಳ ಪರಿಹಾರಕ್ಕಾಗಿ ಮನೆ ಬಾಗಿಲಿಗೆ ಜಿಲ್ಲಾಡಳಿತ

0
0
dav
loading...

ರಬಕವಿ-ಬನಹಟ್ಟಿ: ಸಾರ್ವಜನಿಕರ ಕಷ್ಟಗಳನ್ನು ಪರಿಹರಿಸುವ ಸಲುವಾಗಿ ಜಿಲ್ಲಾಡಳಿತ ತಮ್ಮ ಮನೆ ಬಾಗಿಲಿಗೆ ಬಂದಿದೆ ಎಂದು ಜಿಲ್ಲಾಧಿಕಾರಿ ಕೆ. ಜಿ. ಶಾಂತಾರಾಮ ಹೇಳಿದರು.
ಅವರು ರಬಕವಿ-ಬನಹಟ್ಟಿ ನಗರದ ನಗರಸಭೆಯ ಸಭಾಭವನದಲ್ಲಿ ನಡೆದ ತಾಲೂಕು ಮಟ್ಟದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರಕಾರ ಜನತೆಯ ಬಳಿಗೆ ಬರುತ್ತಿದ್ದು, ಪ್ರತಿ ತಿಂಗಳಿಗೊಮ್ಮೆ ತಾಲೂಕಾಮಟ್ಟದಲ್ಲಿ ಜನ ಸಂಪರ್ಕ ಸಭೆಯನ್ನು ನಡೆಸಲಾಗುವುದು. ಈ ಬಾರಿಯಲ್ಲಿ ತರಾ ತುರಿಯಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮುಂದಿನ ಬಾರಿ ಮುಂಚಿತವಾಗಿ ಈ ಕುರಿತು ಮಾಹಿತಿ ನೀಡಿ ಸಭೆಯನ್ನು ಆಯೋಜಿಸಲಾಗುವುದು ಕಾರಣ ಎಲ್ಲ ಸಾರ್ವಜನಿಕರು. ತಮ್ಮ ಸಮ್ಯೆಗಳನ್ನು ಹೊತ್ತು ಬಾಗಲಕೋಟೆಗೆ ಬರುವ ಬದಲು ಇಲ್ಲಿಯೇ ತಮ್ಮ ಸಮಸ್ಯೆಗಳಿಗೆ ಸಕಾರಾತ್ಮಕವಾಘಿ ಸ್ಪಂದಿಸಿ ತಮ್ಮ ಯಾವುದೇ ಕೆಲಸವಿರಲಿ ಆದು ನಮ್ಮ ಕೈಯಲ್ಲಿ ಆಗುತ್ತಿದ್ದರೆ ಮಾಡಿಕೊಡುತ್ತೇವೆ. ಯಾರನ್ನು ಸತಾಯಿಸುವುದಿಲ್ಲ. ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಜನಸ್ನೇಹಿಯಾಗಿದೆ. ತಾವೆಲ್ಲರೂ ಸಹಕರಿಸಿ ಯಾವುದೇ ಅರ್ಜಿ ಇದ್ದರೂ ಸೂಕ್ತವಾಗಿ ಬಗೆಹರಿಸಲಾಗುವುದು ಎಂದರು.
ವೇದಿಕೆಯ ಮೇಲೆ ಜಮಖಂಡಿ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ, ನಗರಸಭೆ ಪೌರಾಯುಕ್ತ ಆರ್‌. ಎಂ. ಕೊಡಗೆ, ಉಪ ತಹಶೀಲ್ದಾರ ಎಸ್‌. ಬಿ. ಕಾಂಬಳೆ, ಶಿರಸ್ತೆದಾರರಾದ ಬಿ. ಎಂ. ಬಿಜ್ಜರಗಿ, ವೃತ್ತ ಕಂದಾಯ ನಿರೀಕ್ಷಕರಾದ ಶ್ರೀಕಾಂತ ಮಾಯನ್ನವರ, ಬಿ. ಪಿ. ಚೌಧರಿ, ಬಸವರಾಜ ತಾಳಿಕೋಟಿ, ಪ್ರಕಾಶ ವಂದಾಲ ಸೇರಿದಂತೆ ಅನೇಕರು ಇದ್ದರು.

loading...