ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿ: ಶ್ರಿÃಗಳು

0
0
loading...

ವಿಜಯಪುರ: ಶರಣರು ಸಮಾನತೆಯಿಂದ ಕೂಡಿದ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿ, ತಮ್ಮ ವಚನಗಳ ಮೂಲಕ ಸಮಾನತೆಯ ತತ್ವ ಸಾರಿದರು ಎಂದು ಶ್ರಿÃ ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ಹೇಳಿದರು.
ವಿಜಯಪುರದ ಗುರುಪಾದೇಶ್ವರ ನಗರದಲ್ಲಿರುವ ಶ್ರಿÃ ತೋಂಟದಾರ್ಯ ಅನುಭವ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಬಸವ ದರ್ಶನ ಪ್ರವಚನ ಮಂಗಲೋತ್ಸವ ಹಾಗೂ ಕೃಷಿ ಸಾಧಕ ಎನ್.ಕೆ. ಕುಂಬಾರ ಅವರ ಕುರಿತಾಗಿ ಹೊರತರಲಾದ `ಕೃಷಿ ಪಂಡಿತ’ ಗ್ರಂಥ ಬಿಡುಗಡೆ ಸಮಾರಂಭದ ಸಾನಿಧ್ಯ ವಹಿಸಿ ಆಶೀವರ್ಚನ ನೀಡಿದರು.

ವಚನಗಳ ಮೂಲಕ ಸಮಾಜದಲ್ಲಿ ಬೇರೂರಿದ್ದ ಅಸಮಾನತೆ, ಕಂದಾಚಾರಗಳನ್ನು ಕಟುವಾಗಿ ಟೀಕಿಸಿದರು. ಸಮಾನತೆಗಾಗಿ ನಡೆದ ಈ ಜಗತ್ತಿನ ಪ್ರಥಮ ಕ್ರಾಂತಿ ಎಂದರೆ ಅದು ಕಲ್ಯಾಣ ಕ್ರಾಂತಿ ಆ ಕ್ರಾಂತಿಯ ಹಿಂದೆ ಜಗತ್ತಿನ ಎಲ್ಲ ಧರ್ಮಗಳ ಮೌಲ್ಯಗಳು ಸೇರಿಕೊಂಡಿದ್ದವು ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಗದಗ ತೋಂಟದಾರ್ಯ ಮಠದ ಡಾ.ಸಿದ್ಧಲಿಂಗ ಮಹಾಸ್ವಾಮಿಗಳು ಆಶೀವರ್ಚನ ನೀಡಿ, ದ್ರಾಕ್ಷಿ, ದಾಳಿಂಬೆ ಬೆಳೆಗಳ ವಿಷಯದಲ್ಲಿ ವಿಶೇಷ ಪರಿಣಿತ ಹೊಂದಿದ ಎನ್.ಕೆ.ಕುಂಬಾರ ಅಭಿನಂದನಾರ್ಹ ಕಾರ್ಯ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಕೃಷಿ ಪಂಡಿತ ಕೃತಿ ಸಂಪಾದಿಸಿದ ಸಾಹಿತಿ ಶಂಕರ ಬೈಚಬಾಳ ಮಾತನಾಡಿದರು. ಬಸವ ದರ್ಶನ ಪ್ರವಚನ ನೀಡಿದ ಅನ್ನಪೂರ್ಣ ಅಕ್ಕನವರು `ಕಲ್ಯಾಣ ಕ್ರಾಂತಿ’ ಕುರಿತು ಪ್ರವಚನ ನೀಡಿದರು. ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಚೆನ್ನಮ್ಮ ಹಳ್ಳಿಕೇರಿ, ಅಭಯಕುಮಾರ ನಾಂದ್ರೆÃಕರ, ಪೀರಗೊಂಡ ಗದ್ಯಾಳ, ಬಸವರಾಜ ಗದ್ವಾಲ, ಎಸ್.ಎಸ್.ಪಟ್ಟಣಶೆಟ್ಟಿ, ಜಿ.ಆರ್.ಸೂಳಿಭಾವಿ, ಡಾ. ರವಿ ಪಾಟೀಲ, ಜಿ.ಎಸ್.ಜೋಗುರ, ಎಸ್.ಕೆ.ಇಂಗಳೇಶ್ವರ, ಎಸ್.ಆರ್.ಸೂಳಿಭಾವಿ, ವಿ.ಎಸ್.ಹೇರಲಗಿ, ಪಂಚಪ್ಪ ಕಲಬುರ್ಗಿ, ಸಂಜುಗೌಡ ಪಾಟೀಲ, ಎಸ್.ಆರ್.ಗದಗ, ಎಸ್.ವಿ.ಗಡಗಿ, ಆರ್ ಪಿ. ಹಿರೇಮಠ, ಸಿ.ಎಸ್.ಪಾಟೀಲ ಉಪಸ್ಥಿತರಿದ್ದರು.

loading...