ಸರ್ಕಾರ ಪತನವಾಗುವುದಂತೂ ನಿಶ್ಚಿತ: ಬಸನಗೌಡ ಯತ್ನಾಳ

0
0
loading...

ವಿಜಯಪುರ: ಸರ್ಕಾರ ಪತನವಾಗುವುದಂತೂ ನಿಶ್ಚಿತ, ಈಗ ಕಾಲವೂ ಸನ್ನಿಹಿತವಾಗಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತೊಮ್ಮೆ ಸರ್ಕಾರ ಪತದನ ಬಗ್ಗೆ ಮುನ್ಸೂಚನೆ ನೀಡಿದರು.
ಮತ ಚಲಾವಣೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂ.ಸಿ. ಮನಗೂಳಿ ಅವರು ಇಸ್ರೆÃಲ್ ದೇಶದಿಂದ ಮರಳುವಷ್ಟರಲ್ಲಿಯೇ ಮಾಜಿಯಾಗಿ ಬಿಡುತ್ತಾರೆ, ಸರ್ಕಾರ ಪತನಗೊಂಡು ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೆ ಎಂದರು.

ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದ ಸಿದ್ಧರಾಮಯ್ಯನವರು ಈಗ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದ್ದಾರೆ. ವಿಧಾನ ಪರಿಷತ್ ಉಪಚುನಾವಣೆಗೆ ಮತ ಹಾಕದೇ ಯುರೋಪ್ ಪ್ರವಾಸ ಕೈಗೊಂಡು ಮತದಾನದ ಹಕ್ಕು ಚಲಾಯಿಸಿಲ್ಲ, ಆ ಮೂಲಕ ಪವಿತ್ರ ಕಾರ್ಯವನ್ನು ಮರೆತಿದ್ದಾರೆ, ಅಷ್ಟೆÃ ಅಲ್ಲದೇ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದ್ದಾರೆ ಎಂದು ಸಿದ್ಧರಾಮಯ್ಯ ವಿರುದ್ಧ ಯತ್ನಾಳ ವಾಗ್ದಾಳಿ ನಡೆಸಿದರು.
ಸಚಿವ ಸಂಪುಟ ವಿಸ್ತರಣೆಯ ವಿದ್ಯಮಾನಗಳ ನಂತರ ಕಾಂಗ್ರೆಸ್‌ನಲ್ಲಿ ಮತ್ತೊಮ್ಮೆ ಫೈಟ್ ಆರಂಭಗೊಳ್ಳಲಿದೆ. ಆಗಲೂ ಎಂ.ಬಿ. ಪಾಟೀಲರಿಗೆ ಸಚಿವ ಸ್ಥಾನ ದೊರಕುವುದಿಲ್ಲ. ಈ ಕಾರಣಕ್ಕೆ ಎಂ.ಬಿ. ಪಾಟೀಲರು ಬಿಜೆಪಿಗೆ ಬರಲಿ, ಬಿ.ಎಸ್. ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಅವರಿಗೆ ಸಚಿವ ಸ್ಥಾನವನ್ನೂ ನೀಡುತ್ತೆÃವೆ ಎನ್ನುವ ಮೂಲಕ ಎಂ.ಬಿ. ಪಾಟೀಲರನ್ನು ಯತ್ನಾಳ ಬಿಜೆಪಿಗೆ ಆಹ್ವಾನಿಸಿದರು.

loading...