ಸಾಮೂಹಿಕ ಮದುವೆ ದುಂದು ವೆಚ್ಚಕ್ಕೆ ಕಡಿವಾಣ: ರುದ್ರಮುನಿ ಶಿವಾಚಾರ್ಯರು

0
1
loading...

 

ಹುನಗುಂದ-ಆಧುನಿಕ ಆಡಂಬರದ ಜೀವನದಲ್ಲಿ ಸಾಮೂಹಿಕ ವಿವಾಹಗಳು ಬಡ ಜನತೆಗೆ ಸಹಾಯಕವಾಗಿದ್ದು ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಸುಲಭವಾಗಿ ಮದುವೆ ಮಾಡಲು ಸಹಾಯಕವಾಗಿದೆ ಎಂದು ಹಡಗಲಿ ನಿಡಗುಂದಿಯ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಅವರು ನಗರದ ಸಂಗಮೇಶ್ವರ ಜೀರ್ಣೋದ್ದಾರ ಸಮಿತಿಯು ಶ್ರಿÃಸಂಗಮೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ೧೩ ಜೋಡಿಯ ಸಾಮೂಹಿಕ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡುತ್ತ ಗೃಹಸ್ಥಾಶ್ರಮ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಮುಖ್ಯವಾದ ಹಂತವಾಗಿದ್ದು,ಇಲ್ಲಿ ಸತಿ ಪತಿಗಳು ಬದುಕಿನಲ್ಲಿ ಬರುವ ಕಷ್ಟ ಸುಖಗಳನ್ನು ಸಮಾನವಾಗಿ ಹಂಚಿಕೊಂಡು ಸಂಸಾರ ರಥವನ್ನು ಸಾಗಿಸಿದರೇ ಜೀವನ ಬಂಗಾರದಂತಾಗುವುದು.ಸೊಸೆಯಾದವಳು ಅತ್ತೆ ಮಾವರನ್ನು ತಂದೆ-ತಾಯಿಯಂತೆ ಕಾಣುವಂತಾಗಬೇಕು ಎಂದರು.ಚಳಗೇರಿಯ ವೀರಪಾಕ್ಷ ಶಿವಾಚಾರ್ಯರು ಸಾನಿಧ್ಯವಹಿಸಿಕೊಂಡು ಮಾತನಾಡಿದರು.ಡಾ.ಮಹಾಂತೇಶ ಕಡಪಟ್ಟಿ,ಮಹಾಂತಯ್ಯ ಗಚ್ಚಿನಮಠ,ವಿ.ಮ ಬ್ಯಾಂಕ್ ನಿರ್ದೇಶಕ ಮಹಾಂತೇಶ ಅವಾರಿ ಮಾತನಾಡಿದರು.

ಈ ಸಂದರ್ಭದಲ್ಲಿ ೧೩ ಜೋಡಿ ನವ ವಧು-ವರರು ನೂತನ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಪುರಸಭೆಯ ಅಧ್ಯಕ್ಷೆ ಗಂಗಮ್ಮ ಎಮ್ಮಿ,ವಿ.ಮ.ಬ್ಯಾಂಕ್ ಅಧ್ಯಕ್ಷ ಶಶಿಕಾಂತ ಪಾಟೀಲ, ಗೌರಿಶಂಕರ ಸಹಕಾರಿ ಪತ್ತಿನ ಸಂಘದ ಉಪಾಧ್ಯಕ್ಷ ಮಲ್ಲಿಕಾರ್ಜುನ ಲೆಕ್ಕಿಹಾಳ, ಬಿ.ವಿ.ಪಾಟೀಲ, ತಿರುಪತಿ ಕುಷ್ಟಗಿ,U ÀÄರಣ್ಣ ಗೋಡಿ, ಮಲ್ಲು ವೀರಾಪೂರ, ಎಂ.ಎಸ್.ಮಠ, ಅರುಣ ದುದ್ಗಿ, ಶೇಖರಪ್ಪ ಬಾದವಾಡಗಿ, ಸೇರಿದಂತೆ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

loading...