ಸಾಹಿತ್ಯ ಕ್ಷೆÃತ್ರಕ್ಕೆ ಶರಣರ ಕೊಡುಗೆ ಅಪಾರ: ತೆಗ್ಗಿಹಳ್ಳಿ

0
0
loading...

ಸಾಹಿತ್ಯ ಕ್ಷೆÃತ್ರಕ್ಕೆ ಶರಣರ ಕೊಡುಗೆ ಅಪಾರ: ತೆಗ್ಗಿಹಳ್ಳಿ

ಕನ್ನಡಮ್ಮ ಸುದ್ದಿ-ರಾಮದುರ್ಗ: ಶರಣರು ಸಾದು ಸಂತರು ಕವಿಗಳು ನಮ್ಮ ಸಾಹಿತ್ಯ ಕ್ಷೆÃತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಯುವ ಜನತೆ ಸಾಹಿತ್ಯವನ್ನು ಅಧ್ಯಯನ ಮಾಡುವ ಅಭಿರುಚಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಪ್ರೊ. ಪಿ.ಬಿ. ತೆಗ್ಗಿಹಳ್ಳಿ ಹೇಳಿದರು.
ಪಟ್ಟಣದ ಪ್ರಗತಿ ಪ್ರೌಢಶಾಲೆಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕಾ ಘಟಕದ ನೇತೃತ್ವದಲ್ಲಿ ಹಮ್ಮಿಕೊಂಡ ವಚನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
೧೨ ನೇ ಶತಮಾನದ ಬಸವಾದಿ ಪ್ರಮಥರು ನುಡಿದಂತೆ ನಡೆದು, ಕಾಯಕವೇ ಕೈಲಾಸ ಎಂದು ತಮ್ಮ ಸಂದೇಶಗಳನ್ನು ವಚನಗಳ ರೂಪದಲ್ಲಿ ನಮಗೆ ಬಿಟ್ಟು ಹೋಗಿದ್ದು, ಅವುಗಳ ತಿರುಳು ಅರಿತುಕೊಂಡ ಸನ್ಮಾರ್ಗದಲ್ಲಿ ನಡೆಯಬೇಕೆಂದರು. ಶರಣ ಸಾಹಿತ್ಯ ಪರಿಷತ್ ತಾಲೂಕಾ ಘಟಕದ ಅಧ್ಯಕ್ಷ ಕೆ.ವಿ. ಅಜವಾನ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಿಂ. ಡಾ. ಶಿವರಾತ್ರಿ ರಾಜೇಂದ್ರ ಸ್ವಾಮಿಜಿ ಹಾಗೂ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಉಪನ್ಯಾಸಕ ಪ್ರೊ| ಆರ್.ಬಿ. ಜಿನಗೌಡ ಮಾತನಾಡಿ, ಡಾ| ವೈ.ಬಿ. ಕುಲಗೋಡ, ಪ್ರಾಚಾರ್ಯ ವಿ.ಬಿ. ಸೋಮನ್ನವರ, ಪ್ರಗತಿ ಶಾಲೆಯ ಅಧ್ಯಕ್ಷ ಎಸ್. ನಾಗಕಲಾಲ ಡಾ| ವಿ.ಎಸ್. ನಿವೃತ್ತ ಉಪನ್ಯಾಸಕ ಆರ್.ಎಂ. ಪಾಟೀಲ, ಕೆ.ಆರ್. ವಾಲಿ, ಪ್ರೊ| ಆರ್.ಎಸ್. ಗುದಗನವರ, ಶಿವಾನಂದ ಚಿಕ್ಕೊÃಡಿ, ಎಸ್.ಎಂ. ಸಕ್ರಿ, ಪ್ರಗತಿ ಶಾಲೆಯ ಮುಖ್ಯೊÃಪಾಧ್ಯಾಯ ಐ.ಆರ್. ಹವಳಕೋಡ ಉಪಸ್ಥಿತರಿದ್ದರು.
ಶಿಕ್ಷಕ ಎಸ್.ಬಿ. ಶಿರಸಂಗಿ ನಿರೂಪಿಸಿದರು. ಶರಣ ಸಾಹಿತ್ಯ ಪರಿಷತ್ ಕೋಶಾಧ್ಯಕ್ಷ ವಿ.ಬಿ. ಜಂಬಗಿ ವಂದಿಸಿದರು.

loading...