ಸಿಎಂ ಕುಮಾರಸ್ವಾಮಿ ಆಡಳಿತ ಮೆಚ್ಚಿದ ಜನತೆ: ಪಾಟೀಲ

0
0
loading...

 

ಕನ್ನಡಮ್ಮ ಸುದ್ದಿ-ನರಗುಂದ: ರಾಜ್ಯದ ಮೈತ್ರಿ ಸರ್ಕಾರ ಉತ್ತಮ ಕಾರ್ಯಾಡಳಿತ ಮಾಡುತ್ತಿದೆ. ಬಹುದಿನಗಳಿಂದ ಸಮಸ್ಯೆಯಲ್ಲಿದ್ದ ರಾಜ್ಯದ ರೈತರ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕ್‍ಗಳಲ್ಲಿನ ಸಾಲಮನ್ನಾ ಮಾಡಿದ್ದಕ್ಕೆ ರಾಜ್ಯದ ಜನ ಕುಮಾರಸ್ವಾಮಿಯವರ ಆಡಳಿತವನ್ನು ಮೆಚ್ಚಿಕೊಂಡಿದ್ದಾರೆ ಎಂದು ಜೆಡಿಎಸ್ ತಾಲೂಕ ಮತಕ್ಷೇತ್ರದ ಅಧ್ಯಕ್ಷ ಆರ್.ಎನ್. ಪಾಟೀಲ ತಿಳಿಸಿದರು.
ಪಟ್ಟಣದ ಜೆಡಿಎಸ್ ಕಾರ್ಯಾಲಯದಲ್ಲಿ ಸೋಮವಾರ ಜರುಗಿದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಬಡವರ ದೀನ ದಲಿತರ ಬದುಕನ್ನು ಹಸನಾಗಿಸಲು ಕುಮಾರಸ್ವಾಮಿಯವರ ಸಮ್ಮಿಶ್ರ ಸರ್ಕಾರ ಸಿದ್ದವಿದೆ. ಸದ್ಯ ರಾಜ್ಯದಲ್ಲಿ ನಡೆದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಚುನಾವಣೆಗಳಲ್ಲಿ ಜೆಡಿಎಸ್ ಉತ್ತಮ ಫಲಿತಾಂಶ ಹೊಂದಿದೆ. ಬರುವ ಪ್ರಸಕ್ತ ವರ್ಷದ ಮಾರ್ಚ ಅವಧಿಯಲ್ಲಿ ನರಗುಂದ ಪುರಸಭೆಯ 23 ವಾರ್ಡ್‍ಗಳಿಗೆ ಚುನಾವಣೆ ನಡೆಯಲಿದ್ದು ಜೆಡಿಎಸ್‍ನಿಂದ ಉತ್ತಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅವರ ಗೆಲುವಿಗಾಗಿ ಶ್ರಮಿಸಲಾಗುವುದು.
ಜೆಡಿಎಸ್ ಬಲಪಡಿಸಲು ಕಳೆದ ಒಂದು ತಿಂಗಳಿನಿಂದ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಸಂಚರಿಸಿ ಜೆಡಿಎಸ್ ಕಾರ್ಯಕರ್ತರ ಅಭಿಮಾನಿಗಳ ಸಭೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಕುರಿತು ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎನ್.ಎಚ್. ಕೋನರಡ್ಡಿ ಮತ್ತು ಹಿರಿಯ ಮುಖಂಡರಿಗೂ ತಿಳಿಸಲಾಗಿದ್ದು ಆವರ ನಿರ್ಣಯದಂತೆ ಮುಂದಿನ ನಿರ್ಧಾರ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಜೆಡಿಎಸ್ ಘಟಕದ ಕಾರ್ಯಾಧ್ಯಕ್ಷ ಎಚ್.ಎನ್.ಹಳಕಟ್ಟಿ, ಜೆಡಿಎಸ್ ಜಿಲ್ಲಾ ಎಸ್‍ಟಿ ಘಟಕದ ಅಧ್ಯಕ್ಷ ಪರಶುರಾಮ ಹಿರೇಮನಿ, ಡಾ. ಎಚ್.ಆರ್. ಹಿರೇಹಾಳ, ಚಂದ್ರಗೌಡ ಪಾಟೀಲ, ಶ್ರೀಪಾದ ಆನೇಗುಂದಿ, ಜಗದೀಶ ಬೆಳವಟಗಿ, ಈರನಗೌಡ ಪಾಟೀಲ, ಅನ್ನಪ್ಪಗೌಡ ಪಾಟೀಲ, ಪಿ.ಎಂ. ಹಿರೇಮಠ, ಮಲಪ್ಪ ಅರೆಬೆಂಚಿ, ಗೂಳಪ್ಪ ಕಡ್ಲಿಕೊಪ್ಪ, ಎನ್.ಜಿ.ರಾಯರಡ್ಡಿ, ಮಾರುತಿ ಅರ್ಬಣ, ಎಚ್.ಎಂ. ಲಾಡಖಾನ ಅನೇಕರು ಉಪಸ್ಥಿತರಿದ್ದರು.

loading...