ಸಿಬ್ಬಂದಿ ಮೇಲಿನ ಕಿರುಕುಳ ವಿರೋಧಿಸಿ ಧರಣಿ

0
2
loading...

ಕನ್ನಡಮ್ಮ ಸುದ್ದಿ-ನರಗುಂದ: ವಾಕರಾರಸಾ ಸಂಸ್ಥೆ ನರಗುಂದ ಘಟಕದಲ್ಲಿ ಭ್ರಷ್ಟಾಚಾರ ಸೇರಿ ಅನೇಕ ಅವ್ಯವಹಾರಗಳು ನಡೆದಿವೆ. ಆದರೂ ವಿನಾಕಾರಣ ಅಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಮೇಲೆ ಮೇಲಾಧಿಕಾರಿಗಳು ಕಿರುಕುಳ ನೀಡಿ ಅಮಾನತ್ತು ಶಿಕ್ಷೆ ನೀಡುತ್ತಿದ್ದಾರೆ. ಈ ಕುರಿತು ಸಂಬಂಧಿಸಿದ ಸಾರಿಗೆ ಸಂಸ್ಥೆಯ ಜಿಲ್ಲಾ ನಿಯಂತ್ರಣಾಧಿಕಾರಿಗಳು ಹಾಗೂ ಸರ್ಕಾರಕ್ಕೆ ಮನವಿ ನೀಡಿ ಅಧಿಕಾರಿಗಳ ಸರ್ವಾಧಿಕಾರಿ ಧೋರಣೆಯನ್ನು ನಿಲ್ಲಿಸುವಂತೆ ಕೋರಿದ್ದರೂ ಕೂಡ ಅಧಿಕಾರಿಗಳು ಉತ್ತರ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್ ಸಂಘ ಒಕ್ಕೂಟದ ರಾಜ್ಯ ಪ್ರ.ಕಾರ್ಯದರ್ಶಿ ಆರ್.ಪಿ.ದಯಾನಂದಸಾಗರ್ ಹೇಳಿದರು.
ಪಟ್ಟಣದ ನರಗುಂದ ಘಟಕದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಮೇಲಧಿಕಾರಿಗಳ ಕಾರ್ಮಿಕ ವಿರೋಧಿ ನೀತಿಯ ಸರ್ವಾಧಿಕಾರ ಮನೋವೃತ್ತಿ ಕೈ ಬಿಡಬೇಕೆಂದು ಆಗ್ರಹಿಸಿ ಸೋಮವಾರ ನರಗುಂದ ಘಟಕದ ಹೊರ ಆವರಣದಲ್ಲಿ ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್ ಸಂಘ ಒಕ್ಕೂಟದ ಸದಸ್ಯರು ಹಮ್ಮಿಕೊಂಡ ಧರಣಿಯಲ್ಲಿ ಅವರು ಮಾತನಾಡಿದರು.ಕಳೆದ ಎಪ್ರಿಲ್ ತಿಂಗಳಲ್ಲಿ ನರಗುಂದ ಡಿಪೋದಲ್ಲಿ ಬಸ್ ನಿರ್ವಾಹಕರಾಗಿ ಕೆಲಸ ನಿರ್ವಹಿಸುತ್ತಿರುವ ಜಿ.ಕೆ.ಗಾಣಿಗೇರ ಅವರು ಸೇವೆ ಸಲ್ಲಿಸುವ ರೂಟ್ ಬದಲಿಸಿ ಬೇರೆ ರೂಟಿಗೆ ಹಾಕಲಾಗಿತ್ತು. ಇದನ್ನು ಪ್ರಶ್ನಿಸಿದರೆ ಘಟಕದ ರಸ್ತೆ ಸಂಚಾರ ನೀರೀಕ್ಷಕಿಯಾಗಿರುವ ಶೈಲಾ ಜಿಗಳೂರ ಅವರು ರಸ್ತೆ ಸಾರಿಗೆ ನಿಯಮ ಪಾಲಿಸದೇ ಅವರಿಗೆ ಮನಬಂದಂತೆ ಮಾತನಾಡಿ, ಮೇಲಾಧಿಕಾರಿಗಳ ಗಮನಕ್ಕೂ ತಾರದೇ ಗಾಣಿಗೇರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಷ್ಟೇ ಅಲ್ಲದೇ ಮೇಲಾಧಿಕಾರಿಗಳಿಗೆ ತಪ್ಪು ವರದಿ ಸಲ್ಲಿಸಿ ಅವರನ್ನು ಅಮಾನತ್ತು ಮಾಡಿಸಿದ್ದಾರೆ.
ಇಂತಹ ಸರ್ವಾಧಿಕಾರಿ ಮನೋಭಾವನೆ ಅಧಿಕಾರಿಯ ಮಾತನ್ನು ಕೇಳಿ ಅಮಾನತ್ತು ಮಾಡಿದ ಮೇಲಾಧಿಕಾರಿಗಳನ್ನು ಕೇಳಿದರೆ ಸ್ಥಳೀಯ ಅಧಿಕಾರಿಗಳನ್ನು ಬೆಂಬಲಿಸಿ ಮೇಲಧಿಕಾರಿಗಳು ಮಾತನಾಡುತ್ತಿದ್ದಾರೆ. ಇದನ್ನು ಸಹಿಸಲಾಗುವುದಿಲ್ಲ. ರಾಜ್ಯದ ಸಾರಿಗೆ ಸಂಸ್ಥೆಯ ಅಧಿಕಾರಿಗಳ ಭ್ರಷ್ಟತನವೂ ಜೋರಾಗಿದ್ದರಿಂದ ಸಾರಿಗೆ ಸಂಸ್ಥೆಗೆ ಹಾನಿಯಾಗುತ್ತಿದೆ. ಈ ಕಾರಣದ ಹಿನ್ನಲೆಯಲ್ಲಿ ಶೈಲಜಾ ಜಿಗಳೂರ ಮತ್ತು ಭ್ರಷ್ಟತನದಲ್ಲಿ ಭಾಗಿಯಾದ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಬೇಕೆಂದು ಆಗ್ರಹಿಸಿ ಈ ಧರಣಿ ನಡೆಸಲಾಗುತ್ತಿದೆ. ಎರಡು ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಪರಹರಿಸಬೇಕು. ಸಮಸ್ಯೆ ಪರಿಹಾರಗೊಳ್ಳದಿದ್ದರೆ. ಆಮರಣ ಉಪವಾಸದಂತಹ ಪ್ರತಿಭಟನೆಯನ್ನು ನಡೆಸಬೇಕಾದೀತೆಂದು ಸರ್ಕಾರ ಹಾಗೂ ಸಾರಿಗೆ ಸಂಸ್ಥೆ ಮೇಲಾಧಿಕಾರಿಗಳಿ ಎಚ್ಚರಿಸಿದರು.
ಜಿ.ಕೆ.ಗಾಣಿಗೇರ, ಬಾಲಸುಬ್ರಮಣ್ಯಂ, ಆರ್.ಸಿದ್ದರಾಮಯ್ಯ, ರವಿ. ಜಿ.ವ್ಹಿ,ಮದಸ್ವಾಮಿ, ಎಚ್.ಬಿ.ಉಬಲೇಶ್ವರ, ಕೆ.ಎಲ್. ಒಡೆಯರಹಳ್ಳಿ, ಪಿ.ಕೆ. ಹಲವಾಗಿಲ ಇದ್ದರು.

loading...