ಸಿರಿಧಾನ್ಯಗಳು ಆರೋಗ್ಯದ ಗುಟ್ಟು: ವಿದ್ಯಾ ಹುಂಡೇಕರ

0
0
loading...

ಸಿರಿಧಾನ್ಯಗಳು ಆರೋಗ್ಯದ ಗುಟ್ಟು: ವಿದ್ಯಾ ಹುಂಡೇಕರ

ಕನ್ನಡಮ್ಮ ಸುದ್ದಿ- ಬೆಳಗಾವಿ: ಹಿಂದಿನ ಹಿರಿಯರ ಆರೋಗ್ಯ ಗುಟ್ಟಿನ ಮೂಲವಾಗಿರುವ ಸಿರಿಧಾನ್ಯಗಳಲ್ಲಿ ಮಹಿಳೆಯರು ತಯಾರಿಸಿದ ಖಾದ್ಯಗಳು ಬೆರಗು ಮೂಡಿಸುವಂತಿವೆ ಎಂದು ವಿದ್ಯಾ ಹುಂಡೇಕರ ಹೇಳಿದರು.
ನಗರದ ಟಿಳಕವಾಡಿಯ ನೌಕರರ ಸಭಾಭವನದಲ್ಲಿ ರವಿವಾರ 23 ರಂದು  ಭುವನೇಶ್ವರಿ ಉತ್ಸವ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಹಿನ್ನೆಲೆಯಲ್ಲಿ ವಿವಿಧ ಸಿರಿದಾನ್ಯಗಳ ಸ್ಪರ್ಧೆಗಳು ಜರಗಿದವು.
ಹೂಗಳಿಲ್ಲದೇ ಕೇವಲ ಎಲೆಗಳಿಂದ ಮಾತ್ರ ತಯಾರಿಸಿದ ಸುಂದರ ಹೂ ಕುಂಡಗಳು ಕಣ್ಣು ಕುಕ್ಕುವಂತಿವೆ. ಇಂತಹ ಕಾರ್ಯಕ್ರಮಗಳು ಅವಾಗವಾಗ ನಡೆದರೆ ಮಾತ್ರ ಆರೋಗ್ಯ ಮಾಹಿತಿ ಸಿಕ್ಕಾಂಗುತ್ತದೆ
ನಮ್ಮ ನಾಡಿನ ಸಂಸ್ಕ್ರತಿಯ ಬೆಳೆಗಿಸಲು ಸಿರಿಧಾನ್ಯಗಳಂತ ಭೂಮಿಯಲ್ಲಿ ಬೆಳೆದ ಧ್ಯಾನಗಳು ನಾವು ಸೇವಿಸದರೆ ಮಾತ್ರ ಆರೋಗ್ಯವನ್ನು ರಕ್ಷಾಕವಚದಂತೆ ಕಾಪಾಡಿಕೊಂಡತಾಗುತ್ತದೆ, ಮನುಷ್ಯನ್ನು ರುಚಿಯಾದ ಪದಾರ್ಥಗಳ ಸೇವೆಸುವ ಬದಲು, ಎಲೆ, ಹೂ ,ಸೊಪ್ಪು ಹಣ್ಣುಗಳನ್ಮು ಸೆವೆಸಿ ಆರೋಗ್ಯವನ್ನು ಸದೃಡವಾಗಿಸಕೊಳ್ಳಬೇಕೆಂದರು.
ಈ ಕಾರ್ಯಕ್ರಮದಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದ ಎಲೆಗಳ ಸಿಹಿ ಹಾಗೂ ಖಾರಾ ಪದಾರ್ಥ ತಯಾರಿಕೆ ಎಲೆಗಳ ಜೋಡಣೆ ಬೆಳಗಾವಿ ಕವಿತ್ರಿಯರು ಬರೆದ ಕವನಗಾಯನ ಸ್ಲರ್ಧೆಗಳನ್ನು ನಡೆಸಿದರು.
ಈ ಸಂದರ್ಭದಲ್ಲಿ ನಗರದ ವಿವಿಧ ಮಹಿಳಾ ಮಂಡಳದ ಪದಾದಿಕಾರಿಗಳು, ಭಾರತಿ ಸಂಕಣ್ಣನವರ,ಜ್ಯೋತಿ ಬಾವಿಕಟ್ಟಿ,ವೀಣಾ ನಾಗಮೇತ್ರಿ, ಭಾರತಿ ಜಿರಗೆ, ಲಲಿತಾ ಪಾಟೀಲ, ಆಶಾ ಪಾಟೀಲ, ರತ್ನಪ್ರಭಾ ಬೆಲ್ಲದ, ಜ್ಯೋತಿ ಬದಾಮಿ, ಸುಜಾತಾ, ಮಮದಾಪೂರ, ಚೌಗಲಾ ಹಾಗೂ ಉಪಸ್ಥಿತರಿದ್ದರು.

loading...