ಸುವರ್ಣ ಸೌದಕ್ಕೆ ಕಚೇರಿ ಸ್ಥಳಾಂತರಿಸಲು 3 ತಿಂಗಳು ಕಾಲವಕಾಶ

0
1
loading...

ಸುವರ್ಣ ಸೌದಕ್ಕೆ ಕಚೇರಿ ಸ್ಥಳಾಂತರಿಸಲು 3 ತಿಂಗಳು ಕಾಲವಕಾಶ

ಕನ್ನಡಮ್ಮಸುದ್ದಿ- ಬೆಳಗಾವಿ: ಸೆಪ್ಟೆಂಬರ್‌ ಮೊದಲ ವಾರದಲ್ಲಿ ಸುವರ್ಣ ಸೌದಕ್ಕೆ ಆಡಳಿತ ಕಚೇರಿಗಳನ್ನು ಸ್ಥಳಾಂತರಿಸದಿದರೆ ಸುವರ್ಣ ಸೌದಕ್ಕೆ ಬೀಗ ಜಡಿದು ಮೈತ್ರಿ ಸರ್ಕಾರದ ಕಿವಿಹಿಂಡಲಾಗುವುದು ಎಂದು ಜಿ.ಜೆಪಿ ಮುಖಂಡರಾದ ಅಶೋಕ ಪೂಜಾರಿ ಎಚ್ಚರಿಕೆ ರವಾನಿಸಿದರು.
ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ನಡೆಸಿ ಮಾತನಾಡಿದರ ಅವರು.
ತಿಂಗಳ ಹಿಂದೆಯೇ ಸೌಧದ ಮುಂದೆ ಸಾಂಕೇತಿಕ ಧರಣಿ ಮಾಡಲಾಗಿದೆ ಆದರೂ ರಾಜ್ಯ ಸರಕಾರ ಮೌನಕ್ಕೆ ಶರಣಾಗುತ್ತಿದೆ ಅದಕ್ಕೆ ಆಸ್ಪದ ನೀಡದೆ ಮತ್ತೆ ಉತ್ತರ ಕರ್ನಾಟಕದ ಅಭಿವೃದ್ಧಿಯ ಕೂಗಿಗೆ ಧ್ವನಿ ಎತ್ತಲಾಗುವುದು . ವಿವಿಧ ಮಠಾಧೀಶರ ನೇತೃತ್ವದಲ್ಲಿ ಈ ಭಾಗದ ಅಭಿವೃದ್ಧಿ ಪಡಿಸುವಂತೆ ಹೋರಾಟ ನಡೆಸಲಾಗಿತ್ತು.ಸುವರ್ಣ ವಿಧಾನಸೌಧಕ್ಕೆ ಕಚೇರಿ ಸ್ಥಳಾಂತರವಾಗಬೇಕು. ಅದಕ್ಕೆ ಶಕ್ತಿ ತುಂಬಲು ಸರಕಾರಕ್ಕೆ ಮೂರು ತಿಂಗಳು ಗಡವು ನೀಡಿದ್ದೆವೆ ಎಂದರು.

loading...