ಸೆ.16ರಂದು ಇನ್ ಡೋರ್ ಕ್ರಿಕೆಟ್ ಟೋರ್ನಾಮೆಂಟ್: ಕರಡಿ

0
0
loading...

ಕನ್ನಡಮ್ಮ ಸುದ್ದಿ- ಬೆಳಗಾವಿ: ನಗರದ ಆನಂದ್ಸ್ ಕ್ರಿಕೆಟ್ ಕೋಚಿಂಗ್ ಅಕಾಡೆಮಿ ವತಿಯಿಂದ ಸೆ.16ರಿಂದ 15 ದಿನಗಳ ಕಾಲ ಇನ್ ಡೋರ್ ಬಾಕ್ಸ್ ಕ್ರಿಕೆಟ್ ಟೊರ್ನಾಮೆಂಟ್ ನಡೆಸಲಾಗುತ್ತಿದೆ ಎಂದು ಟ್ರೈನರ್ ಆನಂದ ಕರಡಿ ಹೇಳಿದರು.

ಅವರು ಗುರುವಾರದ ನಗರದ ಭರತೇಶ ಎಜ್ಯುಕೆಷನ್ ಟ್ರಸ್ ಸ್ಕೂಲ್‌ನಲ್ಲಿ ಆಯೋಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿಯೇ ಇನ್‌ಡೋರ್ ಕ್ರಿಕೆಟ್ ಸ್ಕೂಲ್ ಇದೆ ಒಂದಾಗಿದ್ದು,ಉ.ಕರ್ನಾಟಕದ ಕ್ರಿಕೆಟ್ ಪ್ರತಿಭೆ ಗಳನ್ನು ಗುರುತಿಸಿ ಬೆಳೆಸುವ ಉದ್ದೆಶದಿಂದ ಪ್ರಾರಂಭಿಸಲಾಗಿದೆ.
ಸೆ.16ರಿಂದ ಇನ್ ಡೋರ್ ಕ್ರಿಕೆಟ್ ಟೋರ್ನಾಮೆಂಟ್ ನಡೆಯಲಿವೆ.ಈಗ ಸುಮಾರು 8 ಕ್ರಿಕೆಟ್ ಟೀಮ್‌ ಗಳನ್ನು‌ ಕರೆಯಲಾಗಿದೆ.ಪ್ರತಿಯೊಂದು ಟೀಮ್ ಗೆ ಎಂಟೂ ಸಾವಿರ ರೂ.ಪ್ರವೇಶ ಸ್ಕೂಲ್ ಇಡಲಾಗಿದೆ. ಪ್ರಥಮ ಬಹುಮಾನ 20 ಸಾವಿರ ದ್ವಿತೀಯ ಬಹುಮಾನ 10 ಸಾವಿರ ಇಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರುದ್ರಗೌಡಾ ಪಾಟೀಲ,ಅಭಿಷೇಕ ದೇಸಾಯಿ, ಶ್ರೀಹರ್ಷ ಪಾಟೀಲ,ನಾಗೇಶ ಸುತಾರ ಸೇರಿದಂತೆ ಇತರರು ಇದ್ದರು.

loading...