ಸೆ.23ರಂದು ಪ್ರತ್ಯೇಕ ರಾಜ್ಯ ಹೋರಾಟದ ರೂಪರೇಷ: ನಾಗೇಶ

0
0
loading...

 

ಕನ್ನಡಮ್ಮ ಸುದ್ದಿ- ಬೆಳಗಾವಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಕುರಿತು ಸೆ.23 ರಂದು ಬಾಗಲಕೋಟಯ ರಾಜ್ಯ ಪ್ರಧಾನ ಕಚೇರಿ ಚರಂತಿಮಠ ಕಾಂಪ್ಲೆಕ್ಸ್ ಸಂಘದ ಎದುರು ಬೃಹತ್ ಸಭೆಯನ್ನು
ಹಮ್ಮಿಕೊಳ್ಳಲಿದ್ದೆವೆ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ
ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ ಗೊಲಶೇಟ್ಟಿ ಹೇಳಿದರು.

ಅವರು ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿ, ಉತ್ತರ ಕರ್ನಾಟಕ ದ 13 ಜಿಲ್ಲೆಗಳ ಒಳಗೊಂಡ‌ ಉ.ಕ ಪ್ರತ್ಯೇಕ ರಾಜ್ಯದ ವಿವಿಧ ಸಂಘಟನೆಗಳ ಸೇರಿ
ಬಾಗಲಕೋಟಯಲ್ಲಿ‌ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಪ್ರತ್ಯೇಕ ರಾಜ್ಯದಲ್ಲಿ ಬರುವ ಜಿಲ್ಲೆಗಳು, ರಾಜಧಾನಿ ಯಾವುದನ್ನು ಮಾಡಬೇಕು,ಪ್ರತ್ಯೇಕ ರಾಜ್ಯದ ಧ್ವಜದ ವಿನ್ಯಾಸ, ಮುಂದಿನ ಹೋರಾಟ ರೂಪುರೇಷಗಳನ್ನು ಈ ಸಭೆಯಲ್ಲಿ ತೀರ್ಮಾನಿಸಲಾಗುತ್ತದೆ ಎಂದು‌ ಹೇಳಿದರು.

ಅಲ್ಲದೆ ಇದೇ 10ರಂದು ಸಿಎಂ ಕುಮಾರಸ್ವಾಮಿಯವರು ಜಿಲ್ಲೆಗೆ ಆಮಿಸುತ್ತಿದ್ದಾರೆ.ಆದರೆ ಅವರು ಈ ಹಿಂದೆ ಪ್ರತಿಭಟನೆ ವೇಳೆ ನಮ್ಮ‌ ಜೊತೆ 15ದಿನಗಳಲ್ಲಿ
ಕಚೇರಿ ಸ್ಥಳಾಂತರ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದರು ಆದರೆ ಅವರು ಯಾವುದೇ ಕಚೇರಿಯನ್ನು ಸುವರ್ಣ ಸೌಧಕ್ಕೆ ಸ್ಥಳಾಂತರ ಮಾಡಿಲ್ಲ.ಆದ್ದರಿಂದ ಉ.ಕರ್ನಾಟಕಕ್ಕೆ ಹೆಜ್ಜೆ ಇಡುವ‌ ಮೊದಲು ನುಡಿದಂತೆ ನಡೆಯಬೇಕು ಇಲ್ಲ ಉ.ಕ‌ ಹೆಜ್ಜೆ ಇಡಲು ಬೀಡುವುದಿಲ್ಲ.ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಅಡಿವೇಶ ಇಟಗಿ ಹೇಳಿದರು.

ಈ ಸಂದರ್ಭದಲ್ಲಿ  ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಸೇರಿದಂತೆ ಇತರರು ಇದ್ದರು,

loading...