ಸೆ.29ರಂದು ಡಾ.ವಿಷ್ಣು ವರ್ಧನ ಗಾನ ಸಿರಿ ಕಾರ್ಯಕ್ರಮ: ನಿವೇದಿತಾ

0
3
ಕನ್ನಡಮ್ಮ ಸುದ್ದಿ- ಬೆಳಗಾವಿ: ಡಾ.ವಿಷ್ಟುವರ್ಧನ ಅವರ ಜನ್ಮ‌ದಿನದ ಸವಿನೆನಪಿಗಾಗಿ ಅವರ ಚಲನಚಿತ್ರ ಆಯ್ದೆ ಸುಮಧುರ ಗೀತೆಗಳ ಡಾ.ವಿಷ್ಣು ವರ್ಧನ ಗಾನ ಸಿರಿ ಎಂಬ ಶಿರ್ಷೀಕೆಯಡಿ ಸೆ.29ರಂದು ರಾಮನಾಥ ಮಂಗಲ‌ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನವೇದಿತಾ ಚಂದ್ರಸೇಕರ ಹೇಳಿದರು.
 ಅವರು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಕಲೆ‌ , ಸಾಹಿತ್ಯ, ಕ್ರೀಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಚೈತನ್ಯ ಕಲಾ ನಿಕೇತನ ಎಂಬ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.  ಸಂಗೀತ ಕಲೆ ವಿಭಾಗಕ್ಕೆ ನಿವೇದಾರ್ಪಣ ಅಕ್ಯಾಡಮಿ ಆಫ್ ಮ್ಯುಜಿಕ್ ಎಂಬ ಹೆಸರಿನಲ್ಲಿ ಸಂಗೀತ ಕಾರ್ಯಕ್ರಮಗಳೊಂದಿಗೆ ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸಾಗಿದೆ.
ಈಗಾಗಲೇ ಕಳೆದ 9 ತಿಂಗಳ ಅವದಿಯಲ್ಲಿ 5 ಮುಕ್ತ ಕಾರ್ಯಕ್ರಮಗಳನ್ನು ನಿವೇದಾರ್ಪಣ ಮ್ಯುಜಿಕ್ ಅಕಾಡಮಿ ಪರವಾಗಿ ನೀಡಲಾಗಿದ್ದು, ಒಂದು ಸಮಗೀತ ಸ್ಪರ್ಧೆ ಯನ್ನು ವಿವಿಧ ಗುಂಪುಗಳಲ್ಲಿ ಏರ್ಪಡಿಸಲಾಗಿತ್ತು. ಪ್ರತಿ ವರ್ಷ ಕನಿಷ್ಠ ಎರಡು ಉತ್ತಮ ಮುಕ್ತ ಕನ್ನಡ ಸಂಗೀತ ಕಾರ್ಯಕ್ರಮಗಳನ್ನು ಮತ್ತು ಉಳಿದಂತೆ ಕನ್ನಡ,ಮರಾಠಿ, ಹಿಂದಿ ಕರೋಕೆ ಸಂಗೀತ ಕಾರ್ಯಕ್ರಮಗಳನ್ನು ನಿರಂತರವಾಗಿ ಸಂದರ್ಭಾನುಸಾರ ನೀಡಲು ಉದ್ದೇಶಿಸಲಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಡಾ.ವಿಷ್ಣು ವರ್ಧನ ಗಾನ ಸಿರಿ ಎಂಬ‌ ಕಾರ್ಯಕ್ರಮವನ್ನು ಸೆ.29ರಂದು ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮಕ್ಕೆ ಪತ್ರಕರ್ತ ಮನೋಹರ ಪ್ರಸಾದ, ನಟ ನಿರ್ದೇಶಕ ಯಶ್ವಂತ ದೇಸಪಾಂಡೆ ಆಗಮಿಸಲಿದ್ದಾರೆ.
 ಈ ಸಂದರ್ಭದಲ್ಲಿ ವಸಂತ ಮನೋಹರ, ಮುತಾಲಿಕ, ಶಶಿಕಲಾ ಸೇರಿದಂತೆ ಇತರರು‌ಇದ್ದರು.
loading...