ಸೈನಿಕರ ಸೇವೆ ದೇಶಕ್ಕೆ ಅತ್ಯಮೂಲ್ಯ: ಮಾಜಿ ಶಾಸಕ ಸಂಜಯ

0
0
loading...

ಸೈನಿಕರ ಸೇವೆ ದೇಶಕ್ಕೆ ಅತ್ಯಮೂಲ್ಯ: ಮಾಜಿ ಶಾಸಕ ಸಂಜಯ
ಕನ್ನಡಮ್ಮ ಸುದ್ದಿ-ಬೆಳಗಾವಿ: ಸೈನಿಕರ ಸೇವೆ ದೇಶಕ್ಕೆ ಅತ್ಯಮೂಲ್ಯ ಕಾರಣ ಎಲ್ಲರೂ ಸೈನಿಕರಿಗೆ ಗೌರವ ತೋರಿಸಿ ಅವರನ್ನು ಎಂದೂ ನಿಂದಿಸದೇ ಆದರದಿಂದ ಕಾಣಬೇಕು ಎಂದು ಮಾಜಿ ಶಾಸಕ ಸಂಜಯ ಪಾಟೀಲ ಹೇಳಿದರು.
ಬೆಳಗಾವಿ ಗ್ರಾಮೀಣ ಭಾರತೀಯ ಜನತಾ ಪಾರ್ಟಿ ವತಿಯಿಂದ ಶನಿವಾರ ಮಹಾಲಕ್ಷಿö್ಮÃ ನಗರ ವಸಂತ ವಿಹಾರದಲ್ಲಿ ಸರ್ಜಿಕಲ್ ಸ್ಟೆçöÊಕ್ ನಡೆದ ದಿನ ನಿಮಿತ್ತವಾಗಿ ಆಯೋಜಿಸಿದ್ದ ಶೌರ್ಯ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
೨೮ ಸಪ್ಟೆಂಬರ್ ೨೦೧೬ ರ ರಾತ್ರಿ ನಮ್ಮ ಭಾರತೀಯ ಸೇನೆಯು ಪಾಕ್ ಭಯೋತ್ಪಾದಕರ ನೆಲೆಗಳ ಮೇಲೆ ಸರ್ಜಿಕಲ್ ಸ್ಟೆçöÊಕ್‌ನ್ನು ಅತ್ಯಂತ ಯಶಸ್ವಿಯಾಗಿ ನಡೆಸಿ ಭಯೋತ್ಪಾದಕರನ್ನು ಕೊನೆಗೊಳಿಸಲಾಯಿತು. ನಮ್ಮ ಸೇನೆಯು ಆಕ್ರಮಿತ ಕಾಶ್ಮಿÃರದಲ್ಲಿ ಲಾಂಚಿಂಗ್ ಪ್ಯಾಡ್‌ಗಳ ಮೂಲಕ ಯಶಸ್ವಿ ದಾಳಿ ನಡೆಸಿ ಉಗ್ರರ ನೆಲೆಗಳನ್ನು ದ್ವಂಸಗೊಳಿಸಿತು. ಈ ಯಶಸ್ವಿ ಕಾರ್ಯಾಚರಣೆಗೆ ಪ್ರಧಾನಿ ನರೇಂದ್ರ ಮೋದಿಯವರು ಸೈನಿಕರಿಗೆ ಹುರುದುಂಬಿಸಿ ಪ್ರೊÃತ್ಸಾಹ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸನ್ಮಾನ್ಯ ನರೇಂದ್ರ ಮೋದಿಯವರ ಆದೇಶದ ಮೇರೆಗೆ ದೇಶದೆಲ್ಲೆಡೆ ಸೈನಿಕರಿಗೆ ಸಪ್ಟೆಂಬರ್ ೨೯ ರಂದು ಶೌರ್ಯದಿನದ ಆಚರಣೆಯನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜನರಲ್ ಕೆ.ಎನ್ ಮಿರ್ಜಿ, ಕರ್ನಲ್ ಡಾ.ರಮೇಶ ಭಟ್, ಆರ್ಡಿನರಿ ಕ್ಯಾಪ್ಟನ್ ಎಸ್.ಎಮ್. ಖೋತ ರಿಟೈರ್ಡ ಎ.ಎಸ್.ಐ. ಅನಂತರಾವ ಜಾಧವ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಮೋಹಿತೆ, ಯುವರಾಜ ಜಾಧವ, ಪ್ರವೀಣ ಪಾಟೀಲ, ವಿನಯ ಕದಮ, ಯಲ್ಲಪ್ಪಾ ಪಾಟೀಲ, ರಾಮಚಂದ್ರ ಮನ್ನೊÃಳಕರ, ತಾಲೂಕಾ ಪಂಚಾಯತ ಸದಸ್ಯ ರಂಜನಾ ಕೋಲಕಾರ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

loading...