ಹಾಂಕಾಂಗ್ ಆಟಕ್ಕೆ ಟೀಂ ಇಂಡಿಯಾ ಫೀದಾ… ಡ್ರೆÃಸಿಂಗ್ ರೋಂಗೆ ತೆರಳಿ ಕ್ರಿಕೆಟ್ ಸಲಹೆ ನೀಡಿದ ಆಟಗಾರರು

0
1
loading...

ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬಲಿಷ್ಠ ಭಾರತದ ತಂಡದ ವಿರುದ್ಧ ಅತ್ಯುತ್ತಮ ಆಟ ಪ್ರದರ್ಶನ ನೀಡಿ ಕ್ರಿಕೆಟ್ ಜಗತ್ತನ್ನೆÃ ಬೆಚ್ಚಿ ಬೀಳಿಸಿದ್ದ ಹಾಂಕಾಂಗ್ ತಂಡದ ಆಟವನ್ನು ಮೆಚ್ಚಿ ಟೀಮ್ ಇಂಡಿಯಾ ಆಟಗಾರರು ಉಘೇ ಉಘೇ ಎಂದಿದ್ದಾರೆ., ಅಷ್ಟೆÃ ಅಲ್ಲದೇ ಹಾಂಕಾಂಗ್ ತಂಡದ ಡ್ರೆಸ್ಸಿಂಗ್ ರೂಮಿಗೆ ತೆರಳಿ ಆಟಗಾರರನ್ನು ಹುರಿದುಂಬಿಸಿದ್ದಾರೆ.

ಮಂಗಳವಾರ ನಡೆದ ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ೨೬ ರನ್‌ಗಳಿಂದ ಗೆದ್ದ ಭಾರತ ತಂಡ ಎದುರಾಳಿಯ ಕೆಚ್ಚೆದೆಯ ಪ್ರದರ್ಶನವನ್ನು ಮೆಚ್ಚಿದೆ. ಅಷ್ಟೆÃ ಅಲ್ಲ, ತಂಡದ ಎಲ್ಲ ಆಟಗಾರರು ಹಾಂಕಾಂಗ್ ಆಟಗಾರರ ಡ್ರೆಸ್ಸಿಂಗ್ ರೂಮ್‌ಗೆ ತೆರಳಿ ಅಭಿನಂದಿಸಿದ್ದಾರೆ.
ಇತ್ತ ಸೋಲನುಭವಿಸಿದ್ದ ಬೇಸರದಲ್ಲಿದ್ದ ಹಾಂಕಾಂಗ್ ಆಟಗಾರರು ಭಾರತೀಯ ಆಟಗಾರರು ತಮ್ಮ ಡ್ರೆಸ್ಸಿಂಗ್ ರೋಮ್‌ಗೆ ಬಂದಿರುವುದನ್ನು ಕಂಡು ಆಶ್ಚರ್ಯದ ಜೊತೆಗೆ ಸಂತಸ ವ್ಯಕ್ತಪಡಿಸಿದರು.

loading...