ಹುಕ್ಕೇರಿ ಸಂಕೇಶ್ವರದಲ್ಲಿ ಚಿದ್ರ ಚಿದ್ರವಾದ ಕತ್ತಿ ಸಹೋದರ ಭದ್ರ ಕೋಟೆ

0
1
loading...

ಹುಕ್ಕೇರಿ ಸಂಕೇಶ್ವರದಲ್ಲಿ ಚಿದ್ರ ಚಿದ್ರವಾದ ಕತ್ತಿ ಸಹೋದರ ಭದ್ರ ಕೋಟೆ .

ಕನ್ನಡಮ್ಮ ಸುದ್ದಿ -ಸಂಕೇಶ್ವರ : ಹುಕ್ಕೇರಿ ಮತ್ತು ಸಂಕೇಶ್ವರ ಪುರಸಭೆ ಚುನಾವಣೆಯಲ್ಲಿ ಕೈ ಮೇಲುಗೈ ಸಾಧಿಸಿದ ಅಚ್ಚರಿಯ ಫಲಿತಾಂಶದಿಂದ ಬಿಜೆಪಿ ಹಿರಿಯ ಮುಖಂಡ ಶಾಸಕ ಉಮೇಶ ಕತ್ತಿ ಅವರಿಗೆ ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರಿಗೆ ತೀವ್ರ ಮುಖಭಂಗವಾಗಿದೆ .

ಇಂದು ಹೊರಬಿದ್ದ ಸ್ಥಳಿಯ ಸಂಸ್ಥೆ ಚುನಾವಣೆ ಹಲವು ಅಚ್ಚರಿಗೆ ಕಾರಣವಾಗಿದೆ.ಹುಕ್ಕೇರಿಯಲ್ಲಿ ಕಳೆದ ಮೂವತ್ತು ವರ್ಷಗಳಿಂದ ಹಿಡಿತ ಸಾಧಿಸಿದ್ದ ಕತ್ತಿ ಸಹೋದರ ಬೆಂಬಲಿತ ಬಿಜೆಪಿ ಅಭ್ಯರ್ಥಿಗಳಿಗೆ ಸೋಲಾಗಿದೆ.ಒಟ್ಟು ೨೩ ವಾರ್ಡ್ ಗಳ ಪೈಕಿ ಕೆವಲ ೮ ರಲ್ಲಿ ಬಿಜೆಪಿ ಗೆದ್ದಿದೆ ಮತ್ತು ಕಾಂಗ್ರೆಸ್ ೧೨ ವಾರ್ಡ ಗಳಲ್ಲಿ ವಿಜಯ ಸಾಧಿಸಿದೆ .ಪಕ್ಷೇತರ ಮೂರು ಜನರು ಆಯ್ಕೆಯಾಗಿದ್ದಾರೆ .
ಇನ್ನೂ ಸಂಕೇಶ್ವರ ಪುರಸಭೆ ಫಲಿತಾಂಶದಲ್ಲಿಯೂ ಅಚ್ಚರಿಯಾಗಿದೆ ೨೩ ರಲ್ಲಿ ೧೧ ಕಾಂಗ್ರೆಸ್ ,೧೧ ಬಿಜೆಪಿ ಗೆದ್ದಿದೆ.ಪಕ್ಷೇತರ ಓರ್ವ ಆಯ್ಕೆಯಾಗಿದ್ದಾನೆ .

ಈ ಮೂಲಕ ಕತ್ತಿ ಸಹೋದರರಿಗೆ ತೀವ್ರ ಮುಖಭಂಗವಾಗಿದೆ.ಮಾಜಿ ಸಚಿವ ಎ.ಬಿ ಪಾಟೀಲ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿ ಗಳು ಭರ್ಜರಿ ಜಯಶಾಲಿಯಾಗಿದ್ದಾರೆ

loading...