ಹುನಗುಂದ ಪಿಕೆಪಿಎಸ್ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ವೇಳೆ ಕಲ್ಲು ತೂರಾಟ : ಲಘು ಲಾಠಿ ಪ್ರಹಾರ

0
0
loading...

ಹುನಗುಂದ-ಪಟ್ಟಣದ ಶತಮಾನ ಕಂಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಉಪಾಧ್ಯಕ್ಷ ನಾಮ ಪತ್ರ ಸಲ್ಲಿಕೆಯ ಪ್ರಕ್ರಿಯೆ ಸಂದರ್ಭದಲ್ಲಿ ಎರಡು ಗುಂಪುಗಳ ಮಧ್ಯ ಮಾತಿನ ಚಕಮಕ್ಕಿ ನಡೆದು ವಿಕೋಪಕ್ಕೆ ತೆರಳಿ ಕಲ್ಲು ತೂರಾಟ ನಡೆದಾಗ ಲಘು ಲಾಠಿ ಪ್ರಹಾರ ನಡೆಯಿತು.
ಘಟನೆ ವಿವರ-ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನೂತನ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಶಾಂತಿಯುತವಾಗಿ ಚುನಾವಣೆ ನಡೆಯಬೇಕಾಗಿದ್ದ ಸಮಯದಲ್ಲಿ ಅಧ್ಯಕ್ಷ ಗಾದಿಗಾಗಿ ಎರಡು ಗುಂಪುಗಳ ನಡುವೆ ಮೊದಲು ಪ್ರಾರಂಭವಾದ ಜಗಳ ಮುಂದೆ ಅದರ ಉದ್ರಿÃಕ್ತಗೊಂಡ ಒಂದು ಬಣದಿಂದ ಕಲ್ಲು ತೂರಾಟ ನಡೆಸಿದಾಗ ಮಾಜಿ ಶಾಸಕರ ಕಾರ ಸೇರಿದಂತೆ ಎರಡು ಪೊಲೀಸ್ ಜೀಪ್‌ಗಳು ಜಖಂಗೊಂಡಿದೆ.
ಈ ಸಂದರ್ಭದಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮೇಲೆ ಹಲ್ಲೆ ನಡೆದಿದ್ದಲ್ಲದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿದೇಶಕರಾದ ರವಿ ಹುಚನೂರ,ನೀಲಪ್ಪ ತಪೇಲಿ,ರಾಮನಗೌಡ ಬೆಳ್ಳಿಹಾಳ,ಮನೋಹರ ವಾಲ್ಮಿÃಕಿ,ದೀಪಾ ಸುಂಕದ ಅನ್ನಪೂರ್ಣ ಹೊಸೂರ,ಬಸವರಾಜ ಹಾದಿಮನಿ,ಮಹಾಂತೇಶ ಹೊಸೂರ ಇವರೆಲ್ಲರ ಮೇಲೆ ಮಾರಣಾಂತಿಕ ಹಲ್ಲೆ ನಡೆದು ಗಾಯಗೊಂಡರೆ ಮುಕ್ಕಣ್ಣ ಮುಕ್ಕನವರ ಎದೆಯ ನೋವಿನಿಂದ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಚುನಾವಣೆ ಮುಂದುಡಿಕೆ-ಅಧ್ಯಕ್ಷ ಸ್ಥಾನಕ್ಕೆ ಮುಕ್ಕಣ್ಣ ಮುಕ್ಕನವರ ಒಂದು ನಾಮಪತ್ರ ಮಾತ್ರ ಸಲ್ಲಿಕೆಯಾಗಿದ್ದು.ಕಾನೂನು ಸುವ್ಯವಸ್ಥೆ ಹದಗೆಟ್ಟ ಕಾರಣದಿಂದ ಚುನಾವಣೆಯನ್ನು ಮುಂದುಡಲಾಗಿದ್ದು.ಪೊಲೀಸ್ ವರದಿಯ ನಂತರ ಚುನಾವಣೆಯ ದಿನಾಂಕವನ್ನು ಗೊತ್ತುಪಡಿಸಿ ಸೂಕ್ತ ಪೊಲೀಸ್ ಬಂದುಬಸ್ತ್ನಲ್ಲಿ ಚುನಾವಣೆ ನಡೆಸಲಾಗುವುದೆಂದು ಚುನಾವಣಾಧಿಕಾರಿ ಎಂ.ಜಿ.ಚಳಗೇರಿ ತಿಳಿಸಿದರು.

==ಹೇಳಿಕೆ===
ಹುನಗುಂದ ನಗರದಲ್ಲಿ ಸಹಕಾರಿ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ನಡೆದ ಘಟನೆಯ ಸಿಸಿ ಟಿವಿಯ ಪುಟೇಜ್ ಆಧಾರದ ಮೇಲೆ ತನಿಖೆ ನಡೆಸಿ ಈ ಗಲಭೆಗೆ ಕಾರಣರಾದ ವ್ಯಕ್ತಿಗಳನ್ನು ಬಂಧಿಸಲಾಗುವುದು ಎಂದು ರೀಷಂತ್ ಕುಮಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಾಗಲಕೋಟ

loading...