ಹುನಗುಂದ ಪಿಕೆಪಿಎಸ್ ಚುನಾವಣೆ: ಭಾಗಿಯಾದ ಐವರ ಬಂಧನ

0
0
loading...

 

ಹುನಗುಂದ: ನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ನಡೆದ ಕಲ್ಲು ತೂರಾಟ ಮತ್ತು ಗಲಾಟೆಯಲ್ಲಿ ಭಾಗಿಯಾದ ಐದು ಜನರನ್ನು ಬಂಧಿಸಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಡಿಎಸ್‌ಪಿ ಎಸ್.ಬಿ.ಗಿರೀಶ ತಿಳಿಸಿದ್ದಾರೆ.
ಈ ಒಂದು ಪ್ರಕರಣದಲ್ಲಿ ೪ ಎಫ್.ಆಯ್.ಆರ್ ದಾಖಲಾಗಿದ್ದು ಒಂದು ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಪಡಿಸಿದಕ್ಕಾಗಿ,ಎರಡು ಬ್ಯಾಂಕ್ ಆಸ್ತಿ ಹಾನಿ,ಮೂರು ಚುನಾವಣೆಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕೆ,ನಾಲ್ಕು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮೇಲೆ ಹಲ್ಲೆ ಮತ್ತು ಅವರ ಕಾರ ಜಖಂಗೊಳ್ಳಿಸಿದ್ದು ಸೇರಿದಂತೆ ನಾಲ್ಕು ಪ್ರಕರಣ ದಾಖಲಿಸಲಾಗಿದೆ,

ಈ ಪ್ರಕರಣಕ್ಕೆ ಸಿಸಿ ಕ್ಯಾಮರ್ ಮತ್ತು ಸ್ಥಳೀಯ ಸಾಕ್ಷಿಯಾಧರ ಮೇಲೆ ೫ ಜನರು ಬಂಧಿತರಾಗಿದ್ದು.ಇನ್ನು ಈ ಪ್ರಕರಣದಲ್ಲಿ ಭಾಗಿಯಾದ ಹಲವರ ಮೇಲೆ ವಿಚಾರಣಿ ನಡೆದಿದ್ದು ಶೀಘ್ರದಲ್ಲಿಯೇ ಅವರನ್ನು ಕೂಡಾ ಬಂಧಿಸಲಾಗುವುದು. ಬಂಧಿತರ ಮೇಲೆ ದೊಂಬಿ, ಗಲಭೆ, ಸಾರ್ವಜನಿಕ ಆಸ್ತಿ ಹಾನಿ, ಹಲ್ಲೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಪ್ರಕರಣದಲ್ಲಿ ಬಂಧಿತರಾದ ವ್ಯಕ್ತಿಗಳು-ಮಂಜುನಾಥ ನಾಗಪ್ಪ ಆಲೂರ, ಮುತ್ತಪ್ಪ ಶಿವಪ್ಪ ಅಮರಾವತಿ, ಮುತ್ತಣ್ಣ ಮಲ್ಲಪ್ಪ ಹಾವರಡ್ಡಿ, ಹನಮಂತ ನೀಲಪ್ಪ ಆರಿ, ಸುಭಾಸ ಸಿದ್ದಪ್ಪ ಮುಕ್ಕನವರನ್ನು ಬಂಧಿಸಿ ತನಿಖೆಗೆ ಒಳಪಡಿಸಲಾಗಿದೆ.

loading...