ಹೆಸರು ಖರೀದಿ ಕೇಂದ್ರ ಉದ್ಘಾಟಿಸಿದ ಶಾಸಕ ಬಂಡಿ

0
0
loading...

ಕನ್ನಡಮ್ಮ ಸುದ್ದಿ-ನರೇಗಲ್ಲ: ದೇಶದ ಅನ್ನದಾತರ ನೆರವಿಗೆ ಧಾವಿಸಿ, ರೈತರ ಹಿತಕಾಯುವ ಬದ್ಧತೆಯನ್ನು ಪ್ರಧಾನಿ ಮೋದಿ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಕರ್ನಾಟಕ ಸೇರಿದಂತೆ ದೇಶದ ಲಕ್ಷಾಂತರ ರೈತರಿಗೆ ಬೆಂಬಲ ಬೆಲೆಯಿಂದ ಅನುಕೂಲವಾಗಿದೆ. ಕನಿಷ್ಠ ಬೆಂಬಲ ಬೆಲೆಯಲ್ಲಿ ಗಣನೀಯ ಹೆಚ್ಚಳವು ರೈತರ ಹಿತಕಾಯುವ ಪ್ರಮುಖ ನಿರ್ಧಾರವಾಗಿದೆ ಎಂದು ರೋಣ ಶಾಸಕ ಕಳಕಪ್ಪ ಬಂಡಿ ಹೇಳಿದರು.
ಅವರು ಪಟ್ಟಣದ ಜಕ್ಕಲಿ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಉಪಸಮಿತಿ ಪ್ರಾಂಗಣದಲ್ಲಿ ಭಾನುವಾರ 2018-19ನೇ ಸಾಲಿನ ನಾಫೆಡ್ ಸಂಸ್ಥೆಯ ಬೆಂಬಲ ಯೋಜನೆಯಡಿ ಹೆಸರು ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

ಹೆಸರು ಪ್ರತಿ ಕ್ವಿಂ.ಗೆ 6975 ರೂ.ಗಳನ್ನು ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರ 8 ತಿಂಗಳ ಹಿಂದೆಯೇ ರೈತರರು ಬೆಳೆದ ಬೆಳೆಗೆ ಬೆಂಬಲ ಬೆಲೆಯನ್ನು ಘೋಷಣೆಮಾಡಿತ್ತು. ರೋಣ ತಾಲೂಕಿನ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಒಟ್ಟು 7 ಹೆಸರು ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಸದ್ಯಕ್ಕೆ ರಾಜ್ಯದಲ್ಲಿ 23,250 ಮೆಟ್ರಿಕ್ ಟನ್ ಹಸೆರು ಖರೀದಿಗೆ ಅವಕಾಶವಿದೆ. ಇದನ್ನು ಇನ್ನಷ್ಟು ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರದ ಗಮನಕ್ಕೆ ತರಲು ಪ್ರಯತ್ನಿಸುತ್ತೇನೆ. ರೈತರ ಅನುಕೂಲಕ್ಕಾಗಿ ಸ್ಥಾಪಿಸಲಾದ ಈ ಕೇಂದ್ರಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಟಿಎಪಿಎಂಸಿ ಅಧ್ಯಕ್ಷ, ಮಾಜಿ ಶಾಸಕ ಎಸ್.ವಿ. ಬಿದರೂರ, ಹೊಳೆಆಲೂರ ಎಪಿಎಂಸಿ ಅಧ್ಯಕ್ಷ ವೀರಣ್ಣ ಶೆಟ್ಟರ್ ಮಾತನಾಡಿದರು. ಎಪಿಎಂಸಿ ಸದಸ್ಯ ನಿಂಗನಗೌಡ ಲಕ್ಕನಗೌಡ್ರ, ಬಸನಗೌಡ ಪೊಲೀಸ್‍ಪಾಟೀಲ, ಜಗದೀಶ ಕರಡಿ, ಉಮೇಶ ಸಂಗನಾಳಮಠ, ಪ.ಪಂ ಮಾಜಿ ಸದಸ್ಯ ಯಲ್ಲಪ್ಪ ಮಣ್ಣವಡ್ಡರ, ಸಶೀಧರ ಸಂಕನಗೌಡ್ರ, ಷಣ್ಮುಖಪ್ಪ ಶಿದ್ನೆಕೊಪ್ಪ ಸೇರಿಂದತೆ ಇದ್ದರು. ಮುತ್ತು ಕಡಗದ ನಿರ್ವಹಿಸಿದರು.

loading...