ಹೊರ ರಾಜ್ಯಗಳಿಗೆ ಅಕ್ರಮವಾಗಿ ರಾಜ್ಯದ ಮಣ್ಣು ಮಾರಾಟ

0
1
loading...

ಬೆಂಗಳೂರು:ಕೆರೆಗಳಲ್ಲಿರುವ ಬಂಗಾರದಂತಹ ಬೆಲೆ ಬಾಳುವ ಮಣ್ಣನ್ನು ಕೋಟ್ಯಾಂತರ ರೂಪಾಯಿಗಳಿಗೆ ಹೊರ ರಾಜ್ಯಗಳಿಗೆ ಮಾರಾಟ ಮಾಡುತ್ತಿರುವ ದಂಧೆ ಜಿಲ್ಲೆಯಲ್ಲಿ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ಕೋಲಾರ ಜಿಲ್ಲೆ ಮಾಲೂರು ತಾಲೂಕು ಬಳಗಾನಹಳ್ಳಿ,ಲಕ್ಕೂರು,ಚಿಕ್ಕತಿರುಪತಿ ಗ್ರಾಮಗಳ ಕೆರೆಗಳಲ್ಲಿ ಈ ದಂಧೆ ನಡೆದಿದೆ. ಜೆಸಿಬಿ ಯಂತ್ರಗಳ ಮೂಲಕ ಮಣ್ಣನ್ನ ತೆಗೆದು ರಾತ್ರೋರಾತ್ರಿ ಲಾರಿಗಳ ಮೂಲಕ ಹೊರ ರಾಜ್ಯಗಳಿಗೆ ಕಳುಹಿಸಿಕೊಡುತ್ತಿದ್ದಾರೆ.
ಕೋಟ್ಯಾಂತರ ರೂಪಾಯಿ ಮೌಲ್ಯದ ಔಷಧಿ ಗುಣಗಳಿರುವ, ವಿವಿಧ ಅಲಂಕಾರಿಕ ವಸ್ತುಗಳ ತಯಾರಿಕೆಗೆ ಬೇಕಾದಂತ, ಬೇರೆ ರಾಜ್ಯಗಳಲ್ಲಿ ಹೆಚ್ಚು ಬೇಡಿಕೆ ಇರುವ ಜೇಡಿ ಮಣ್ಣನ್ನ ಹೊರ ರಾಜ್ಯಗಳಿಗೆ ಅಕ್ರಮವಾಗಿ ಕಳುಹಿಸಿಕೊಡಲಾಗುತ್ತಿದೆ. ಅದು ನೆರೆಯ ಆಂಧ್ರ, ತಮಿಳುನಾಡು,ಕೇರಳ ರಾಜ್ಯಗಳಲ್ಲಿ ಈ ಮಣ್ಣಿಗೆ ಎಲ್ಲಿಲ್ಲದ ಬೇಡಿಕೆ ಇದ್ದು,ಕೋಟ್ಯಾಂತರ ರೂಪಾಯಿಗೆ ಜಿಲ್ಲೆಯ ಕೆರೆ ಮಣ್ಣನ್ನು ಮಾಫಿಯಾದವರು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇನ್ನು ಮಾಫಿಯಾದವರು ಕೆರೆಗಳನ್ನು ಬಗೆಯುತ್ತಿದ್ದು, ಕೆರೆಗಳಲ್ಲಿ ನೀರು ಖಾಲಿಯಾಗುತ್ತಿದೆ. ಇದರಿಂದ ಕೆರೆಗಳಲ್ಲಿ ಪ್ರಪಾತದ ರೀತಿಯಲ್ಲಿ ಹಳ್ಳಗಳು ನಿರ್ಮಾಣವಾಗಿ ನೀರು ಕುಡಿಯಲು ಪ್ರಾಣಿಗಳ ಬಲಿ ಪಡೆಯುತ್ತಿವೆ.
ಇನ್ನು ಈ ಬಗ್ಗೆ ಕಂದಾಯ ಇಲಾಖೆ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರ ಆರೋಪ ಮಾಡಿದ್ದಾರೆ.

loading...