183.33 ಕೋಟಿ ರೂ. ತೆರಿಗೆ ಪಾವತಿಸುವಂತೆ ಮೈಸೂರು ರಾಜವಂಶಸ್ಥರಿಗೆ ಸೂಚನೆ

0
1
loading...

ಬೆಂಗಳೂರು:ಮೈಸೂರು ರಾಜವಂಶಸ್ಥರಾದ ಕಾಮಾಕ್ಷಿದೇವಿ ಹಾಗೂ ಮೀನಾಕ್ಷಿ ದೇವಿ ಅವರು 183.33 ಕೋಟಿ ರೂ. ತೆರಿಗೆ ಪಾವತಿಸುವಂತೆ ಹೈಕೋರ್ಟ್ ತೀರ್ಪು ನೀಡಿದೆ.
ಮೀನಾಕ್ಷಿ ದೇವಿ ಹಾಗೂ ಕಾಮಕ್ಷಿ ದೇವಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ತಲಾ 28 ಎಕೆರೆ ಭೂಮಿ ಹೊಂದಿದ್ದಾರೆ. ಇವರಿಬ್ಬರಿಗೂ 1999-2000 ರಿಂದ 2004-05ರವರೆಗೆ ಸಂಪತ್ತು ತೆರಿಗೆ ಪಾವತಿಸುವಂತೆ ಐಟಿ ನೋಟಿಸ್ ನೀಡಿತ್ತು.
ಆದರೆ ಸಹೋದರಿಯರು ತಾವು ಈ ಭೂಮಿಯನ್ನು ವಾಣಿಜ್ಯ ಉಪಯೋಗಕ್ಕೆ ಬಳಸುತ್ತಿಲ್ಲ.ಹಾಗಾಗಿ ತೆರಿಗೆ ಸಲ್ಲಿಸುವ ಪ್ರಮೇಯವಿಲ್ಲ ಎಂದು ಐಟಿ ನೀಡಿದ್ದ ನೋಟಿಸ್ ಪ್ರಶ್ನಿಸಿ ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು.
ಸಮಗ್ರ ವಿಚಾರಣೆ ನಡೆಸಿದ ಹೈಕೋರ್ಟ್ ರಾಜವಂಶಸ್ಥರಾದ ಮೀನಾಕ್ಷಿದೇವಿ, ಕಾಮಾಕ್ಷಿದೇವಿಯವರಿಗೆ 183.33 ಕೋಟಿ ರೂ. ತೆರಿಗೆ ಪಾವತಿಸಲು ಆದೇಶ ನೀಡಿದೆ.

loading...