ಅದ್ಧೂರಿಯಾಗಿ ನಡೆಯುತ್ತಿರುವ ದುರ್ಗಾಮಾತಾ ದೌಡ್ : ಗಮನ ಸೆಳೆಯುತ್ತಿರುವ‌ ಕುದುರೆ ಸವಾರಿ

0
0
loading...

ಅದ್ಧೂರಿಯಾಗಿ ನಡೆಯುತ್ತಿರುವ ದುರ್ಗಾಮಾತಾ ದೌಡ್ : ಗಮನ ಸೆಳೆಯುತ್ತಿರುವ‌ ಕುದುರೆ ಸವಾರಿ

ಕನ್ನಡಮ್ಮ ಸುದ್ದಿ- ಬೆಳಗಾವಿ‌: ನಗರದಲ್ಲಿ ಪ್ರತಿ ವರ್ಷ ದಸರಾ ಮಹಾನವಮಿ‌ ನಿಮಿತ್ತ ನಡೆಯುವ ಹಾಗೂ ನಗರದ ಸಂಸ್ಕೃತಿಯನ್ನು ಸಾರು ಸಾರುವ ದುರ್ಗಾಮಾತಾ ದೌಡ್ ಇಂದು ಮುಂಜಾನೆ ರಾಣಿ ಚನ್ನಮ್ಮ ವೃತ್ತದಿಂದ ಕೋಟೆ ಕೆರೆ ಯಲ್ಲಿ ಇರುವ ದುರ್ಗಾಮಾತಾ ದೇವಾಲಯದ ವರೆಗೂ ನಡೆಯಿತು.

ಬೆಳಗಾವಿ ಯುವ‌ಕರು, ಯುವತಿಯ ಬಿಳಿಯ ಬಟ್ಟೆ ತಲೆಗೆ ಕೇಸರಿ ಪಟಗಾ ಸುತ್ತಿ ರಸ್ತೆ ಯುದ್ಧಕ್ಕೂ ಹೆಜ್ಜೆ ಹಾಕಿದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ಉತ್ತರದ ಕ್ಷೇತ್ರದ ಶಾಸಕ ಅನಿಲ ಬೆನಕೆ ಪಾಲ್ಗೊಂಡು ದುರ್ಗಾಮಾತಾ ದೌಡ್ ಗೆ ಚಾಲನೆ‌ ನೀಡಿದರು.

ರಂಗೋಲಿ ಹಾಕಿ ಸ್ವಾಗತ: ದುರ್ಗಾಮಾತಾ ಬರುವ ಮೊದಲೇ ರಸ್ತೆಯ ಉದ್ದಕ್ಕೂ ಬಣ್ಣ,ಬಣ್ಣದ ರಂಗೋಲಿಯನ್ನು ಮನೆಯ ಮುಂದೆ ಮಹಿಳೆಯರು ಹಾಕುವ ಮೂಲಕ‌ ದುರ್ಗಾಮಾತಾಕ್ಕೆ ಅದ್ದೂರಿಯಿಂದ ಸ್ವಾಗತ ಕೋರಿದರು.

ಗಮನ‌ಸೆಳೆದ‌ ಕುದುರೆ ಸವಾರಿ: ನಗರದಲ್ಲಿ ನವರಾತ್ರಿ ನಿಮಿತ್ತ ಒಬ್ಬಂತು‌ ದಿನಗಳ ಕಾಲ‌ ನಡೆಯುವ ದುರ್ಗಾ ಮಾತಾ ದೌಡ ಧಾರ್ಮಿಕ ಹಬ್ಬಕ್ಕೆ ಪ್ರತಿ ವರ್ಷ ಕುದುರೆ ಸಾವರಿ ಗಮನ ಸೆಳೆಯುತ್ತಿದೆ.ಈ ಬಾರಿಯು ಸಹ ಯುವಕ ತಂಡ ದೌಡ ಕಾರ್ಯಕ್ರಮದಲ್ಲಿ ಕುದುರೆಯನ್ನು ಅಲಂಕಾರಗೊಳಿಸಿ ಸವಾರಿ ಮಾಡುತ್ತಿರುವುದು ಗಮನ ಸೆಳೆಯುತ್ತಿದೆ.

loading...