ಅಮೆರಿಕಾದಲ್ಲಿ ಶೂಟೌಟ್: 11 ಸಾವು

0
1
loading...

ಪಿಟ್ಸ್ ಬರ್ಗ್: ಅಮೆರಿಕಾದ ಪಿಟ್ಸ್ ಬರ್ಗ್ ನಗರದ ಸಿನ್’ಗಾಗ್ ಬಳಿ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಯಹೂದಿ ಪ್ರಾರ್ಥನಾ ಮಂದಿರದ ಬಳಿ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ 11 ಮಂದಿ ಮೃತಪಟ್ಟು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ.

ದಾಳಿ ನಡೆಸಿದ ವ್ಯಕ್ತಿಯನ್ನು ರಾಬರ್ಟ್ ಬೊವರ್ಸ್ (46) ಎಂದು ಗುರ್ತಿಸಲಾಗಿದೆ. ಘಟನೆ ವೇಳೆ ಸ್ಥಳಕ್ಕಾಗಮಿಸಿದ್ದ ಪೊಲೀಸರು ಹಾಗೂ ಬಂದೂಕುಧಾರಿ ನಡುವೆ ಭಾರೀ ಗುಂಡಿನ ಕಾಳಗ ನಡೆದಿತ್ತು. ಈ ವೇಳೆ ಆರೋಪಿಯನ್ನು ಸೆರೆಹಿಡಿಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ದಾಳಿ ವೇಳೆ ಬಂದೂಕುಧಾರಿ ಕೂಡ ಗಾಯಗೊಂಡಿದ್ದಾನೆಂದು ತಿಳಿದುಬಂದಿದೆ.
ಗುಂಡಿನ ದಾಳಿ ನಡೆಸುವ ವೇಳೆ ಆರೋಪಿ ಎಲ್ಲಾ ಯಹೂದಿಗಳು ಸಾಯಲೇಬೇಕೆಂದು ಕೂಗಾಡಿದ್ದಾನೆಂದು ಹೇಳಲಾಗುತ್ತಿದೆ.
ಘಟನೆ ಕುರಿತಂತೆ ಎಫ್’ಬಿಐ ತನಿಖೆ ನಡೆಸುತ್ತಿದ್ದು, ದಾಳಿಯ ಹಿಂದಿನ ಉದ್ದೇಶ ಕುರಿತಂತೆ ಈ ವರೆಗೂ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.

loading...