ಅರಮನೆಯಲ್ಲಿ ಖಾಸಗಿ ದರ್ಬಾರ್ ಆರಂಭ

0
1
loading...

ಬೆಂಗಳೂರು:ನಾಡಹಬ್ಬ ಮೈಸೂರು ದಸರಾಗೆ ಚಾಲನೆ ಸಿಕ್ಕಿದು, ದಸರಾ ಸಂಭ್ರಮ ಮನೆ ಮಾಡಿದ್ದ ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಯಿತು.
ಅಂದ ಹಾಗೇ 12ರಿಂದ 12.35ಒಳಗೆ ಶುಭ ಲಗ್ನದಲ್ಲಿ ರಾಜವಂಶಸ್ಥ ಯದುವೀರ್ ಸಿಂಹಾಸನರೋಹಣ ಮಾಡಿದರು.
ದರ್ಬಾರ್‍ಗೂ ಮುನ್ನ ಸಿಂಹ ಶಕ್ತಿ ಆಹ್ವಾನಿಸಲು ರತ್ನ ಖಚಿತ ಸಿಂಹಾಸನದ ಸಿಂಹಮೂರ್ತಿಗೆ ಅರಿಶಿಣ, ಕುಂಕುಮ, ಪುಷ್ಪಗಳ ಮೂಲಕ ರಾಜ ಪುರೋಹಿತರ ಮಾರ್ಗದರ್ಶನದಲ್ಲಿ ಯದುವೀರ್ ಪೂಜೆ ಸಲ್ಲಿಸಿದರು.ಈ ವೇಳೆ ಚಾಮುಂಡಿಯ ಗೀತೆ ಗಾಯನ ಹಾಡಲಾಯಿತು.
ಅಂದಹಾಗೇ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‍ತಿಳಿ ನೀಲಿ ಬಣ್ಣದ ಸಾಂಪ್ರಾದಾಯಿಕ ಮೈಸೂರಿನ ಪೇಟ, ಗುಲಾಬಿ ವರ್ಣದ ನಿಲುವಂಗಿ,ಪೈಜಾಮ ಹಾಗೂ ನಿಲುವಂಗಿಯ ಮೇಲೆ ರಾರಾಜಿಸುತ್ತಿರುವ ಗಂಡ ಭೇರುಂಡ ರಾಜ ಲಾಂಛನ ಇದ್ದ ಮುತ್ತಿನ ಹಾರ, ಸ್ವರ್ಣ ಹಾರ, ಸ್ವರ್ಣ ತೋಳು ಬಂಧಿ, ಮುತ್ತು-ರತ್ನ ಖಚಿತ ಉಂಗುರಗಳನ್ನು ತೊಟ್ಟು ರಾಜ ಪೋಷಾಕಿನಲ್ಲಿ ಕಂಗೊಳಿಸುತ್ತಿರುವ ಯದುವೀರ್ ಒಡೆಯರ್ ಖಾಸಗಿ ದರ್ಬಾರ್ ಆರಂಭಿಸಿದರು.
ಇದಕ್ಕೂ ಮುನ್ನ ಅರಮನೆಯ ರಾಜವಂಶಸ್ಥರ ಶರನ್ನವರಾತ್ರಿಯ ಪೂಜಾ ವಿಧಿ ವಿಧಾನಗಳು ನಡೆದವು, ಬೆಳಿಗ್ಗೆಯಿಂದಲೇ ಗಣಪತಿ ಹೋಮ ಸೇರಿದಂತೆ ಎಲ್ಲ ಹೋಮ ಹವನಗಳನ್ನ ನಡೆಸಿ ನಂತರ ಯದುವೀರ್ ನವರಾತ್ರಿಯ ಮೊದಲ ದಿನದ ಪೂಜಾ ವಿಧಿ ವಿಧಾನಗಳನ್ನ ನಡೆಸಲಾಯಿತು.
ಖಾಸಗಿ ದರ್ಬಾರ್‍ಗೂ ಮುನ್ನ ಪಟ್ಟದ ಒಂಟೆ, ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗಳಿಗೆ ಆನೆ ಬಾಗಿಲಿನ ಒಳಗಿರುವ ಕಲ್ಯಾಣ ತೊಟ್ಟಿಯಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ನಂತರ ರತ್ನಖಚಿತ ಸಿಂಹಾಸನಕ್ಕೆ ಯದು ಪರಂಪರೆಯ ರೀತಿಯಲ್ಲಿ ಪೂಜೆ ನಡೆಸಿ ಖಾಸಗಿ ದರ್ಬಾರ್ ನಡೆಸಲಾಯಿತು. ಇನ್ನು ಈ ಖಾಸಗಿ ದರ್ಬಾರ್ 9 ದಿನಗಳ ಕಾಲ ನಡೆಯಲಿದೆ. ವಿಜಯ ದಶಮಿಯ ದಿನ ಕೊನೆಗೊಳ್ಳಲಿದೆ.

loading...