ಇಟಗಿ: ಛಲವಾದಿ ಮಹಾಸಭಾ ಅಸ್ತಿತ್ವಕ್ಕೆ

0
0
loading...

ನಿಡಗುಂದಿ: ಯಾವುದೇ ಮೂಲಭೂತ ಸೌಕರ್ಯ ಇಲ್ಲದೆಯೂ ಹಲವಾರು ಅಡೆತಡೆಗಳನ್ನು ಮೆಟ್ಟಿ ಡಾ. ಅಂಬೇಡ್ಕರ ಅವರು ಶಿಕ್ಷಣದಲ್ಲಿ ಮಾಡಿದ ಸಾಧನೆ ಅಪಾರ, ಆದರೆ ಇವತ್ತು ಎಲ್ಲಾ ಸೌಲಭ್ಯಗಳ ನಡುವೆಯು ಛಲವಾದಿ ಸಮಾಜದ ಮಕ್ಕಳು ಶಿಕ್ಷಣದಿಂದ ದೂರವಿರುವುದು ವಿಷಾದನೀಯ ಎಂದು ಛಲವಾದಿ ಸಂಘದ ನಿಡಗುಂದಿ ತಾಲ್ಲೂಕು ಘಟಕದ ಅಧ್ಯಕ್ಷ ಶೇಖರ ದೊಡಮನಿ ಹೇಳಿದರು.
ಇಟಗಿ ಗ್ರಾಮದಲ್ಲಿ ನಡೆದ ಇಟಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಛಲವಾದಿ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ವಿವಿಧ ಉದ್ದೆÃಶಗಳಿಂದ ಚದುರಿದ ಸಮುದಾಯವನ್ನು ಒಂದುಗೂಡಿಸುವದೇ ಸಂಘದ ಮೂಲ ಉದ್ದೆÃಶ ಎಂದರು.

ಮುಖಂಡರಾದ ಪ್ರಶಾಂತ ಚಲವಾದಿ, ಯಲಗೂರೇಶ ಪಾತ್ರದ ಅವರು ಮಾತನಾಡಿ, ‘ಮುಂದಿನ ಸಮುದಾಯದ ಭವಿಷ್ಯಗಳಾದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಉನ್ನತ ಹುದ್ದೆಗೇರಿಸಿ ಸಮುದಾಯವನ್ನು ಮೇಲೆತ್ತುವ ಕೆಲಸವಾಗಬೇಕು ಅದಕ್ಕೆ ಪೂರಕವಾದ ಕೆಲಸವನ್ನು ಸಂಘ ಮಾಡುತ್ತದೆ’ ಎಂದು ಹೇಳಿದರು.
ಇಟಗಿ ಪಂಚಾಯಿತಿ ವ್ಯಾಪ್ತಿಯ ಛಲವಾದಿ ಸಂಘದ ಗೌರವ ಅಧ್ಯಕ್ಷ ಶಿದ್ದಪ್ಪ ಚಲವಾದಿ, ಅಧ್ಯಕ್ಷರಾಗಿ ಪರಸಪ್ಪ ಚಲವಾದಿ, ಉಪಾಧ್ಯಕ್ಷರಾಗಿ ಜುಮ್ಮಪ್ಪ ಚಲವಾದಿ, ಪ್ರಧಾನ ಕಾರ್ಯದರ್ಶಿಯಾಗಿ ಮುತ್ತಪ್ಪ ಚಲವಾದಿ, ಕೋಶಾಧ್ಯಕ್ಷರಾಗಿ ಸಿದ್ದಪ್ಪ ಚಲವಾದಿ, ಸಹ ಕಾರ್ಯದರ್ಶಿಯಾಗಿ ಮಂಜು ಚಲವಾದಿ, ಸಂಘಟನಾ ಕಾರ್ಯದರ್ಶಿಯಾಗಿ ನಾಗಪ್ಪ ಚಲವಾದಿ ಅವರನ್ನು ಆಯ್ಕೆ ಮಾಡಲಾಯಿತು. ಕುಮಾರ ಬಾಗೇವಾಡಿ, ಎಲ್.ಸಿ. ಚಲವಾದಿ, ಎಚ್.ಎಚ್. ದೊಡಮನಿ, ಬಸವರಾಜ ಪೂಜಾರಿ, ಬಸವರಾಜ ಹೊಸಮನಿ, ಎಸ್.ಟಿ ಕಾರಗನೂರ, ರಮೇಶ ಪಿರಗಾ, ಬಿ.ಡಿ. ಚಲವಾದಿ, ಪವಾಡೆಪ್ಪ ಚಲವಾದಿ, ಸಂಗಮೇಶ ಮಡಿಕೇಶ್ವರ ಇದ್ದರು.

loading...