ಉತ್ತರಾಖಂಡದಲ್ಲಿ ಭೂಕಂಪ

0
11
loading...

ನವದೆಹಲಿ: ಉತ್ತರಾಖಂಡದ ಉತ್ತರಕಾಶಿಯಲ್ಲಿ ಬೆಳ್ಳಂಬೆಳಗ್ಗೆ ಭೂಮಿ ಕಂಪಿಸಿದ್ದು,ರಿಕ್ಟರ್ ಮಾಪಕದಲ್ಲಿ 3.2ರಷ್ಟು ತೀವ್ರತೆ ದಾಖಲಾಗಿದೆ ಎಂದು ತಿಳಿದುಬಂದಿದೆ.
ನಸುಕಿನ ಜಾವ 4:06ಕ್ಕೆ ಉತ್ತರಕಾಶಿಯಲ್ಲಿ ಭೂಕಂಪನವಾಗಿದೆ.ಭೂಮಿ ಕಂಪಿಸಿದ ಪ್ರದೇಶಗಳಲ್ಲಿ ಸದ್ಯದ ಪರಿಸ್ಥಿತಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.ಕಳೆದ ಕೆಲವು ದಿನಗಳಿಂದ ಉತ್ತರ ಭಾರತದಲ್ಲಿ ಭೂಕಂಪನವಾಗುತ್ತಿದ್ದು,ಜನರು ಆತಂಕದಲ್ಲಿ ದ್ದಾರೆ.

loading...