ಎನ್‌ಎಸ್‌ಎಸ್‌ದಿಂದ ವ್ಯಕ್ತಿತ್ವ ವಿಕಸನ

0
0
loading...

ಗುಳೇದಗುಡ್ಡ: ನಾವು ನಮಗಾಗಿ ಬದುಕದೇ ಸಮಾಜಕ್ಕಾಗಿ ಬದುಕಬೇಕು. ಸಮಾಜ ಸದೃಢವಾದರೆ ದೇಶ ಬಲಿಷ್ಠವಾಗುವುದು. ಪರಸ್ಪರ ಸಹಕಾರವೇ ಎನ್‌ಎಸ್‌ಎಸ್‌ನ ಧ್ಯೆÃಯೋದ್ಧೆÃಶವಾಗಿದ್ದು, ಎನ್‌ಎಸ್‌ಎಸ್‌ದಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಹೊಂದುತ್ತದೆ ಎಂದು ವಾಣಿಜ್ಯ ತೆರಿಗೆ ಅಧಿಕಾರಿ ಎಂ.ಎಚ್. ಗಾಣಿಗೇರ ಹೇಳಿದರು.

ಅವರು ಇಲ್ಲಿನ ಬಾಲಕಿಯರ ಸರಕಾರಿ ಪಪೂ ಕಾಲೇಜಿನ ಎನ್‌ಎಸ್‌ಎಸ್ ಘಟಕವು ಸಮೀಪದ ತೋಗುಣಶಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ. ಎನ್‌ಎಸ್‌ಎಸ್ ಶಿಬಿರದಲ್ಲಿ ಪಾಲ್ಗೊÃಳ್ಳುವುದರಿಂದ ಗ್ರಾಮ ಜೀವನದ ಅನುಭವ ವಿದ್ಯಾರ್ಥಿಗಳಿಗೆ ದೊರೆಯುತ್ತದೆ ಎಂದರು.

ಪ್ರಭಾರಿ ಪ್ರಚಾರ್ಯ ಎಸ್.ಎ. ಸೂಳಿಭಾವಿ ಮಾತನಾಡಿ, ಗ್ರಾಮಾಭಿವೃದ್ಧಿ ಅಂಶಗಳ ತಿಳುವಳಿಕೆ ಪಡೆದುಕೊಳ್ಳಲು ಇಂತಹ ಶಿಬಿರಗಳು ಅವಶ್ಯವಾಗಿವೆ. ಗ್ರಾಮೀಣ ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿಗೊಳಿಸಲು, ಅವರಲ್ಲಿ ಹುದುಗಿರುವ ಮೂಢನಂಬಿಕೆಗಳನ್ನು ಹೊಗಲಾಡಿಸಲು ಎನ್‌ಎಸ್‌ಎಸ್ ಶಿಬಿರಗಳು ಸಹಕಾರಿಯಾಗಿವೆ ಎಂದರು. ಜಿಪಂ ಸದಸ್ಯೆ ಸರಸ್ವತಿ ಮೇಟಿ, ಗ್ರಾಪಂ ಅಧ್ಯಕ್ಷೆ ಲಕ್ಷಿö್ಮÃಬಾಯಿ ಸೀತಿಮನಿ ಶಿಬಿರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾಗುಂಡಪ್ಪ ನಾಗನಗೌಡರ, ಹುಚ್ಚೆÃಶ ಪೂಜಾರ, ಐ.ಎಸ್. ಭಾವಿ, ಎಂ.ಎಸ್. ಜಕ್ಕನ್ನವರ, ಎಸ್.ಬಿ. ಗುಡಿಹಿಂದಿನ, ಎಂ.ವಿ. ಕುಸೂರ, ಜೆ.ವಿ. ಯಡವನ್ನವರ, ಸರಿತಾ ಚಂದನ್ನವರ, ಎಸ್.ವಿ. ಮುರಟಗಿ, ನದಾಫ್, ಪಿ.ವಿ. ಸಜ್ಜನ ಮತ್ತಿತರರು ಇದ್ದರು.

loading...