ಒಡಿಶಾ, ಆಂಧ್ರ ಪ್ರದೇಶಕ್ಕೆ ಭಾರೀ ಮಳೆಯಾಗುವ ಸೂಚನೆ

0
1
loading...

ಭುವನೇಶ್ವರ್: ಬಂಗಾಳಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತವಾಗಿ ಒಡಿಶಾ, ಆಂಧ್ರ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸೂಚನೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಚಂಡಮಾರುತ ‘ತಿತ್ಲಿ’ಯ ಪರಿಣಾಮ ತೀವ್ರ ಸ್ವರೂಪದ್ದಾಗಿರುವ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಒಡಿಶಾದ ಗೋಪಾಲ್ಪುರ ಹಾಗೂ ಆಂಧ್ರ ಪ್ರದೇಶದ ಕಳಿಂಗಪಟ್ಟಣಂ ನಡುವೆ ಗುರುವಾರ ಬೆಳಿಗ್ಗೆ 145 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ಎಚ್ಚರಿಸಲಾಗಿದೆ.”ತಿತ್ಲಿ ಗಂಟೆಗೆ 10 ಕಿ.ಮೀ. ವೇಗದಲ್ಲಿ ಬೀಸಲಿದ್ದು ಚಂಡಮಾರುತ ಪ್ರಭಾವವು ಒಡಿಶಾದ ಗೋಪಾಲ್ಪುರದಿಂದ 370 ಕಿಮೀ ಆಗ್ನೇಯಕ್ಕೆ ಹೆಚ್ಚಾಗಿರಲಿದೆ ಎಂದು ಐಎಂಡಿ ಬುಲೆಟಿನ್ ನಲ್ಲಿ ಹೇಳಿದೆ. ಗೋಪಾಲ್ಪುರ ಹಾಗೂ ಕಳಿಂಗಪಟ್ಟಣಂ ನಡುವೆ ಭೂಕುಸಿತವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

loading...