ಕಷ್ಟಗಳ ಮಧ್ಯದಿ ಸುಖವನ್ನರಿಸಿ: ಡಾ. ಮುರುಘರಾಜೇಂದ್ರ ಶ್ರಿÃಗಳು

0
0
loading...

ಕೋಳಿಗುಡ್ಡ: ದೊಡ್ಡ ಮನೆ ಕಟ್ಟಿದವರು ದೊಡ್ಡವರಾಗಿಲ್ಲ, ದೊಡ್ಡ ಮನಸ್ಸಿದ್ದವರು ಭೂಮಿ ಮೇಲೆ ದೊಡ್ಡವರಾಗ್ತಾರೆ. ದೊಡ್ಡವರಾಗಲು ನಾವು ಏನು ಮಾಡಬೇಕಿಲ್ಲ ಯಾರು ನೀರಡಿಸಿ ಬಂದರ‍್ತಾರೋ ಅವರಿಗೆ ಒಂದ ಕಪ್ ನೀರ ಕೊಡ್ರಿ, ಯಾರ ಹಸಿದ ಬಂದರ‍್ತಾರೋ ಒಂದ ತತ್ತು ಅನ್ನ ಕೊಡ್ರಿ, ಯಾರು ದು:ಖದಿಂದ ನಿಮ್ಮ ಹತ್ರಾ ರ‍್ತಾರೋ ಅವರ ಕಣ್ಣಿರ ವರೆಸಿ ಎರಡು ಪ್ರಿÃತಿಯ ಮಾತುಗಳನ್ನು ಹೇಳ್ರಿ ನಿಮ್ಮಷ್ಟು ದೊಡ್ಡವರ ಯಾರಾಗುದಿಲ್ಲ ಎಂದು ಮುಗಳಖೋಡ-ಕೋಳಿಗುಡ್ಡ ಮಠದ ಪೀಠಾಧಿಪತಿ ಡಾ. ಮುರುಘರಾಜೇಂದ್ರ ಶ್ರಿÃಗಳು ಹೇಳಿದರು.
ಅವರು ಶ್ರಿÃ ಯಲ್ಲಾಲಿಂಗೇಶ್ವರ ಆನಂದಾಶ್ರಮದಲ್ಲಿ ಲಿಂ. ಆನಂದ ಮಹಾರಾಜರ ೧೭ ನೇ ಪುಣ್ಯರಾಧನಾ ಕೊನೆಯ ದಿನದ ಕಾರ್ಯಕ್ರಮವನ್ನು ಉದ್ಧೆÃಶಿಸಿ ಮಾತನಾಡಿ ಜೀವನದಲ್ಲಿ ಕಷ್ಟಗಳು ಬರುವುದು ಸಹಜ ಅದರ ಮದ್ಯದಲಿ ಸುಖವನ್ನು ಹುಡುಕು. ಬದುಕು ವಿಶಿಷ್ಟವಾದ್ದು ಈ ನಿಸರ್ಗ ಎಲ್ಲರಿಗೂ ಒಂದು ಸುಂದರ ಬದುಕನ್ನು ಕೊಟ್ಟಿದೆ. ವಿದ್ಯಾವಂತ-ಅವಿದ್ಯಾವಂತ, ಶ್ರಿÃಮಂತ-ಬಡವ, ಮೆಲ್ಜಾತಿ-ಕೆಳಜಾತಿ, ಇವರಿಗೆ ಬೇರೆ ಬೇರೆ ಬದುಕನ್ನು ನಿಸರ್ಗ ಕೊಟ್ಟಿಲ್ಲ. ಎಲ್ಲರಿಗೂ ಒಂದೇ ಹಾದಿಯನ್ನು ತೋರಿಸಿದೆ.

ಚಿನಮಗಿರಿಯ ವೀರಮಹಾಂತ ಸ್ವಾಮಿಜಿ, ವಿಶ್ವನಾಥ ಕಾಪಸೆ ಮಹಾರಾಜರು, ಮಡಿವಾಳದ ಸುಭಾಸ ಶರಣರು, ರಂಗನಪೇಟೆಯ ಗುರುಪುತ್ರ ಸ್ವಾಮಿಗಳು ಮಾತನಾಡಿದರು. ಪಿಕೆಪಿಎಸ್ ಬ್ಯಾಂಕಿನ ಅಧ್ಯಕ್ಷರಾದ ಅಪ್ಪಣಗೌಡ ಪಾಟೀಲ, ಶ್ರಿÃಮಠದ ವ್ಯವಸ್ಥಾಪಕರಾದ ಮಲ್ಲಪ್ಪಗೌಡ ಪಾಟೀಲ, ಗ್ರಾಪಂ ಅಧ್ಯಕ್ಷ ಶರಣಪ್ಪಗೌಡ ಪಾಟೀಲ, ತಾಪಂ ಸದಸ್ಯ ರವಿಶಂಕರ ನರಗಟ್ಟಿ, ಅಪ್ಪಾಜಿ ಕಲಾ ಬಳಗದವರು ಹಾಗೂ ಸಾವಿರಾರು ಭಕ್ತಾದಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಕಾರ್ಯಕ್ರಮವನ್ನು ಸುರೇಶ ಕಬ್ಬೂರ ನಿರೂಪಿಸಿ ವಂದಿಸಿದರು.

loading...