ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ

0
0
loading...

ವಿಜಯಪುರ: ಚಡಚಣ ತಾಲೂಕಿನ ರೇವತಗಾಂವ, ನಿವರಗಿ, ದಸೂರ, ಉಮರಜ, ಸೇರಿದಂತೆ ಹಲವಾರು ಗ್ರಾಮಗಳಿಗೆ ಬಹು ನಿರೀಕ್ಷಿತ ಮುಂಗಾರು ಮಳೆ ಕೈ ಕೊಟ್ಟ ಪರಿಣಾಮ ಮುಂಗಾರು ಹಂಗಾಮಿನ ಬೆಳೆ ಹಾಳಾಗಿ ರೈತರು ಸಂಕಷ್ಟದಲ್ಲಿದ್ದು ಅವರಿಗೆ ರೇವತಗಾಂವ ಕಾಲುವೆಗೆ ನೀರು ಹರಿಸುವಂತೆ ಜಿಲ್ಲಾ ಅಧಿಕಾರಿ ಕಾರ್ಯಾಲಯದ ಶಿರಸ್ತೆದಾರ ತೇರದಾಳ ಅವರಿಗೆ ಚಡಚಣ ತಾಲೂಕಿನ ರೈತರು ಮಂಗಳವಾರ ಮನವಿ ಸಲ್ಲಿಸಿದರು.
ಕಾಲುವೆ ನಿರ್ಮಾಣವಾದಾಗಿನಿಂದ ಈ ಕಾಲುವೆಗೆ 2-3 ವರ್ಷದಿಂದಾ ಸರಿಯಾಗಿ ನೀರು ಹರಿಯದೇ ಇರುವುದರಿಂದ ಗ್ರಾಮಸ್ತರು ಹಲವಾರು ಬಾರಿ ಜನ ಪ್ರತಿನಿಧಿಗಳ ಗಮನಕ್ಕೂ ತಂದರು ಕೂಡಾ ಯಾವುದೇ ಪ್ರಯೋಗವಾಗಿಲ್ಲ ದನಕರುಗಳಿಗೆ, ಜನರಿಗೆ ಕುಡಿಯಲು ನೀರು ಸಹ ಸಿಗುತ್ತಿಲ್ಲ. ಬೇಸಿಗೆ ಬರುವ ಮುನ್ನವೇ ರೈತರ ಜೀವನ ಚಿಂತಾಜನಕ ಸ್ಥಿತಿ ನಿರ್ಮಾಣವಾಗಿದೆ. ಕಾರಣ ಈ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ಒಂದು ವಾರದೊಳಗೆ ರೇವತಗಾಂವ ನಿವರಗಿ, ದಸೂರ, ಉಮರಜ ಕಾಲುವೆ ನೀರು ಹರಿಸಿ, ಇಲ್ಲವಾದರೆ ಎಲ್ಲ ರೈತರು ಸೇರಿಕೊಂಡು ಉಗ್ರವಾದ ಹೋರಾಟವನ್ನು ಮಾಡಲಾಗುವುದು ಎಂದು ಒತ್ತಾಯಿಸಿದರು. ರೇವತಗಾಂವ ದನ ಕರುಗಳಿಗೆ ಗೋ ಶಾಲೆ ನಿರ್ಮಿಸಬೇಕು. ಇಲ್ಲಿಯವರೆಗೆ ಬೆಳೆಯ ಪರಿಹಾರ ಸಮೀಕ್ಷೆ ಆಗದೆ ಇರುವುದರಿಂದ ಬೆಳೆ ಪರಿಹಾರ ಸಮೀಕ್ಷೆ ನಡೆಸಬೇಕು. ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಈಗಾಗಲೇ ಎರಡು ಸರಕರಿ ಬಾವಿಗಳನ್ನು ಕೊರೆದಿದ್ದು ಅದರ ನೀರು ದುರುಪಯೋಗವಾಗಿತ್ತುದ್ದು ಅದನ್ನು ತಡೆಗಟ್ಟಿ ಗ್ರಾಮಕ್ಕೆ ಸಮರ್ಪಕ ನೀರನ್ನು ಒದಗಿಸಬೇಕು. ಗ್ರಾಮ ವಿಕಾಸ ಯೋಜನೆಯಡಿ ಗ್ರಾಮಕ್ಕೆ ಯಾವುದೇ ರೀತಿಯ ಪ್ರಗತಿ ಕಾರ್ಯಗಳೇ ಆಗಿಲ ಎಂದು ಮನವಿಯಲ್ಲಿ ದೂರಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಜಿ.ಪಂ. ಅಧ್ಯಕ್ಷ ಮಹಾದೇವ ಹಿರೇಕುರುಬರ, ಧರ್ಮಣ್ಣ ಬಂಡಗಾರ, ಮಲ್ಪಪ್ಪ ಅಡಕಿ, ಸುರೇಶ ಹಾವಿನಾಳ, ಹಣಮಂತ ಮೇತ್ರಿ, ಸುಭಾಸ ಕೆರೆ, ಮಾಳು ಖಂಡೆಗಾರ, ಮಾಯಪ್ಪ ಬಂಡೆಗಾರ, ಶಿದರಾಯ ಡೊಣಗಾಂವ, ಮಲ್ಲಿಕಾರ್ಜುನ ಹಕ್ಕಿ ಮತ್ತಿತರರು ಹಾಜರಿದ್ದರು.

loading...