ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್.ಸ್ವಾಮಿ ಅಮಾನತು

0
0
loading...

ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಎಸಿಬಿ ದಾಳಿಗೊಳಗಾದ ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್.ಸ್ವಾಮಿಯನ್ನು ಅಮಾನತು ಮಾಡಲಾಗಿದೆ.
ಕಳೆದ ವಾರ ಎಸಿಬಿ ತಂಡ ಕೆಐಎಡಿಬಿಯ ಚೀಫ್ ಎಂಜಿನಿಯರ್ ಟಿ.ಆರ್.ಸ್ವಾಮಿ ಹಾಗೂ ಬಿಡಿಎ ಅಧೀಕ್ಷಕ ಅಭಿಯಂತರ ಎನ್.ಜಿ.ಗೌಡಯ್ಯರ ಇಬ್ಬರು ಅಧಿಕಾರಿಗಳ ಮನೆ, ಕಚೇರಿ, ಕುಟುಂಬಸ್ಥರ ಮನೆಗಳ ಮೇಲೆ ದಾಳಿ ಮಾಡಿತ್ತು.ಈ ವೇಳೆ ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಪತ್ತೆಯಾಗಿತ್ತು.
ದಾಳಿ ಮಾಡಿದ ಬಳಿಕ ಎಸಿಬಿ ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಇಬ್ಬರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಎಸಿಬಿ ಮಾಡಿದ್ದ ಶಿಫಾರಸ್ಸು ಆಧರಿಸಿ ಟಿ.ಆರ್ ಸ್ವಾಮಿಯನ್ನು ಅಮಾನತು ಮಾಡಲಾಗಿದ್ದು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತರಿಂದ ಅಮಾನತು ಆದೇಶ ಹೊರಡಿಸಿದೆ.
ಮಾಹಿತಿ ಮೆರೆಗೆ ಎಸಿಬಿ ಅಧಿಕಾರಿಗಳು ಇಬ್ಬರು ಅಧಿಕಾರಿಗಳ ಮನೆಯ ಮೇಲೆ ದಾಳಿ ಮಾಡಿದ್ದರು.ಆದರೆ ಎಸಿಬಿ ಅಧಿಕಾರಿ ಗಳು ರೇಡ್ ಮಾಡುವುದನ್ನು ಮೊದಲೇ ತಿಳಿದ ಟಿ.ಆರ್ ಸ್ವಾಮಿ ಬಾಗಿಲು ತೆಗೆಯದೇ ಡ್ರಾಮಾ ಮಾಡಿದ್ದರು.ಆದರೂ ಪಟ್ಟು ಬಿಡದ ಎಸಿಬಿ ಅಧಿಕಾರಿಗಳು ಬಲವಂತವಾಗಿ ಬಾಗಿಲು ತೆಗೆಸಿ ಪರಿಶೀಲನೆ ನಡೆಸಿದಾಗ ಕೋಟಿ ಕೋಟಿ ದುಡ್ಡು ಸಿಕ್ಕಿತ್ತು.
ಇನ್ನು ಸ್ವಾಮಿ ಅವರ ಕುಟುಂಬಸ್ಥರ ಮತ್ತು ಸಂಬಂಧಿಕರ ಹೆಸರಿನಲ್ಲಿ 8 ಮನೆ, 10 ನಿವೇಶನಗಳು, ವಿವಿಧೆಡೆ 10 ಎಕರೆ ಕೃಷಿ ಜಮೀನು, 1.6 ಕೆಜಿ ಚಿನ್ನ, 3 ಕಾರು, 4.52 ಕೋಟಿ ರೂ ಪತ್ತೆಯಾಗಿತ್ತು.

loading...