ಕೆಪ್‌ಟೌನ್ ಪತಂಗೋತ್ಸವದಲ್ಲಿ ಭಾಗವಹಿಸುತ್ತಿರುವ ಸಂದೇಶ

0
52
loading...

ಬೆಳಗಾವಿ: ಕುಂದನಗರಿ ನಿವಾಸಿಯಾದ ಸಂದೇಶ ಕಡ್ಡಿ ಗಾಳಿಪಟ ಶಿಬಿರಗಳ ಮೂಲಕ ದೇಶ ವಿದೇಶದಲ್ಲಿ ಹೆಸರು ಮಾಡಿದ್ದಾರೆ. ಇದೇ ೧೯ರಿಂದ ೨೩ರವರೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಈಡನ್ ಗಾಳಿಪಟ ಉತ್ಸವದಲ್ಲಿ ಭಾರತದಿಂದ ಸ್ಪರ್ಧಿಸುತ್ತಿದ್ದಾರೆ.
ದಕ್ಷಿಣ ಆಫ್ರಿಕಾದ ಕೆಪಟೌನ್ ಅತಿ ಹಳೆ ಹಾಗೂ ಅತಿ ದೊಡ್ಡ ಗಾಳಿಪಟ ಉತ್ಸವ ನಡೆಯುವ ಸ್ಥಳವಾಗಿದ್ದು ಇಲ್ಲಿ ಅಂತಾರಾಷ್ಟಿçÃಯ ಪತಂಗ ಪ್ರೆÃಮಿಗಳು ಭಾಗವಹಿಸುತ್ತಾರೆ.
ಇದಲ್ಲದೆ ಸಂದೇಶ ಕಡ್ಡಿ ಮಂಡೇಲಾ ನಾಡಿನಲ್ಲಿ ಭಾರತ ತ್ರಿವರ್ಣ ಧ್ವಜವನ್ನು ಹಾರಿಸಲಿದ್ದು ಪತಂಗಳ ಉತ್ಸವ ಆಸಕ್ತಿಯಲ್ಲಿ ಭಾರತ ಯಾವ ರಾಷ್ಟçಕ್ಕಿಂತ ಕಡಿಮೆ ಇಲ್ಲ ಎಂಬುವುದನ್ನು ಸಾಬೀತು ಮಾಡಿದ್ದಾರೆ.
ಕೆಲ ಪಟಗಳನ್ನು ಹರಾಜು ಮಾಡಿ ಬಂದ ಹಣವನ್ನು ಮಂದಬುದ್ದಿ ಹಾಗೂ ಮಾನಸಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ದಾನದ ರೂಪದಲ್ಲಿ ನೀಡುತ್ತಾರೆ. ಅಷ್ಟೆÃ ಅಲ್ಲದೇ ಇವರು ಮಕ್ಕಳಿಗೆ ಗಾಳಿಪಟಗಳ ಕುರಿತು ಶಿಬಿರ ಆಯೋಜನೆ ಮಾಡಿ ಗಾಳಿಪಟಗಳ ಕುರಿತು ಜ್ಞಾನ ನೀಡುತ್ತಾರೆ.
ಈ ಮೂಲಕ ದೇಶ ವಿದೇಶದಲ್ಲಿ ಎಲ್ಲೆà ಗಾಳಿಪಟ ಉತ್ಸವ ನಡೆದರು ಇವರು ಅಲ್ಲೆ ಭಾಗವಹಿಸುತ್ತಾರೆ. ಕಳೆದ ಬಾರಿ ಇವರು ಆಸ್ಟೆçÃಲಿಯಾದಲ್ಲಿ ನಡೆದ ಗಾಳಿಪಟ ಉತ್ಸವದಲ್ಲಿ ಭಾರತದಿಂದ ಭಾಗವಹಿಸಿ ದೇಶ ಗೌರವವನ್ನು ಹೆಚ್ಚಿಸಿದ್ದು ಜೊತೆಗೆ ಕುಂದಾನಗರ ಹೆಸರು ದೇಶ ವಿದೇಶದಲ್ಲಿ ಗುರುತಿಸುವಂತೆ ಮಾಡಿದ್ದಾರೆ.

loading...