ಗುಡಿಸಲಿಗೆ ಬೆಂಕಿ: ಜೋಳಿಗೆಯಲ್ಲಿದ್ದ ಮಗು ಸಜೀವ ದಹನ

0
5
loading...

ಕನ್ನಡಮ್ಮ ಸುದ್ದಿ-ಕೊಪ್ಪಳ: ಹೊಲದಲ್ಲಿನ ಗುಡಿಸಲಿಗೆ ಆಕಸ್ಮಿಕ ಬೆಂಕಿ ತಗುಲಿದ್ದು, ಗುಡಿಸಲೊಳಗೆ ಜೋಳಿಗೆಯಲ್ಲಿ ಮಲಗಿದ್ದ ಎಂಟು ತಿಂಗಳಿನಹಸುಗೂಸು ಸಜೀವವಾಗಿ ಬೆಂಕಿಗೆ ದಹನವಾದ ದುರ್ಘಟನೆ ನಡೆದಿದೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತರಲಕಟ್ಟಿ ಗ್ರಾಮದಲ್ಲಿ ಇಂದು ಮಧ್ಯಾಹ್ನ ಈ ಹೃದಯ ವಿದ್ರಾಯಕ ಘಟನೆ ಜರುಗಿದೆ. ನಿಂಗಪ್ಪ ಹಾಗೂ ಸುನೀತ ದಂಪತಿಯ ಎಂಟು ತಿಂಗಳು ಮಹೇಶ್ ಸಜೀವವಾಗಿ ಸುಟ್ಟು ಕರುಕಲಾಗಿರುವ ಮಗು. ಮಗುವನ್ನು ಗುಡಿಸಲಿನಲ್ಲಿ ಜೋಳಿಗೆಯಲ್ಲಿ ಮಲಗಿಸಿ ಹೊಲದಲ್ಲಿ ಜಮೀನಿನಲ್ಲಿ ಕೃಷಿ ಚಟುಚಟಿಕೆಯಲ್ಲಿ ಮನೆಯವರು ನಿರತರಾಗಿದ್ದರು. ಆಕಸ್ಮಿಕ ವಾಗಿ ಶಾರ್ಟ್ ಸಕ್ರ್ಯೂಟ್ ನಿಂದ ಬೆಂಕಿ ಹೊತ್ತುಕೊಂಡಿರೊ ಶಂಕೆಯನ್ನು ವ್ಯಕ್ತಪಡಿಸಿದ್ದು, ಬೇವೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಸ್ಥಳಕ್ಕೆ ಶಾಸಕರ ಭೇಟಿ : ಘಟನೆಯ ಸುದ್ದಿ ಮಾಹಿತಿ ತಿಳಿಯುತ್ತಿದ್ದಂತೆ ಶಾಸಕ ಹಾಲಪ್ಪ ಆಚಾರ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮಗುವಿನ ತಂದೆ- ತಾಯಿ ಸಂಬಂಧಿಗಳಿಗೆ ಸಾಂತ್ವನ ಹೇಳಿ, ವ್ಯಯಕ್ತಿಕ ಸಹಾಯವನ್ನು ಮಾಡಿದರು. ಬೇವೂರು ಠಾಣೆಯ ಪೊಲೀಸರು ಪ್ರಕರಣದ ಕುರಿತು ಮಾಹಿತಿ ನೀಡಿದರು

loading...