ಗುರುವಿನ ಮಹಿಮೆ ಅಪಾರವಾದುದು: ಹಿರೇಮಠ

0
0
loading...

ರಬಕವಿ-ಬನಹಟ್ಟಿ: ಗುರುವಿನ ಮಹಿಮೆ ಅಪಾರವಾದುದು, ಸದಾ ನಾಮಸ್ಮರಣೆಯಿಂದ ಎಲ್ಲವೂ ಸಾಧ್ಯವೆಂದು ವೇದಮೂರ್ತಿ ಚರಂತಯ್ಯ ಹಿರೇಮಠ ಹೇಳಿದರು.
ಅವರು ಬನಹಟ್ಟಿಯ ಸೋಮವಾರ ಪೇಟದ ಶರಣರ ಬಾವಿ ಹತ್ತಿರವಿರುವ ಹಿರೇಮಠದಲ್ಲಿ ಗಂಗಾಧರ ಸ್ವಾಮಿಗಳ ಹಾಗೂ ಮೃತ್ಯುಂಜಯ ಸ್ವಾಮಿಗಳ ಪುಣ್ಯಾರಾಧನೆ ಪ್ರಯುಕ್ತ ಜರುಗಿದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಗುರುವಿನ ಪುಣ್ಯಾರಾಧನೆ ಅಂಗವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಅನ್ನಸಂತರ್ಪಣೆ ಮಾಡುತ್ತಿರುವುದು ಸ್ತ್ಯುತ್ಯಾರ್ಹವಾದುದು ಎಂದರು. ಇದು ಇಷ್ಟಕ್ಕೆ ಸಿಮೀತಗೊಳಿಸದೆ ಈ ಪುಣ್ಯಾರಾಧನೆ ಒಂದು ದೊಡ್ಡ ಕಾರ್ಯಕ್ರಮವಾಗಿ ಪರಿವರ್ತಿಸಿ ಅನೇಕ ಶರಣರನ್ನು ಕರೆಸಿ ಗುರುವಿನ ಮಹಿಮೆಯ ಆಶೀರ್ವಚನ ಪಡೆಯಬೇಕು ಎಂದರು. ಭಕ್ತಿ-ಭಾವಗಳೊಂದಿಗೆ ನಿತ್ಯ ಗುರು-ಶಿಷ್ಯರನ್ನು ಒಂದು ಮಾಡುವ ನಿತ್ಯ ಕಾಯಕ ಮಠಗಳದ್ದಾಗಿವೆ. ಸನ್ಮಾರ್ಗದೊಂದಿಗೆ ನೆಮ್ಮದಿಯ ಬದುಕು ಕಾಣಲು ಮಠ-ಮಾನ್ಯಗಳಿಗೆ ತೆರಳಿ ಮಾನಸಿಕ ಒತ್ತಡಗಳಿಂದ ದೂರ ಉಳಿಯಲು ಸಾಧ್ಯವೆಂದು ಸಿದ್ಧನಗೌಡ ಪಾಟೀಲ ಹೇಳಿದರು.
ಮಹಾಂತಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಹಿರಿಯರಾದ ಸುರೇಶ ಗಣೇಶನವರ, ಮಲ್ಲಣ್ಣ ಬಾವಲತ್ತಿ, ಸಿದ್ದನಗೌಡ ಪಾಟೀಲ, ಮಲ್ಲಣ್ಣ ಬಾವಲತ್ತಿ, ಶಿವು ಗುಂಡಿ ನಹಾಶಾಂತ ಶೆಟ್ಟರ, ಲಕ್ಷ್ಮಣ ಗುಂಡಿ, ಹುಚ್ಚಪ್ಪ ಬಾಗೇವಾಡಿ, ರಾಜು ಗುಂಡಿ, ಶ್ರೀಶೈಲ ಉಳ್ಳಾಗಡ್ಡಿ, ಮುರಗೆಪ್ಪ ಆದರಗಿ, ಅಶೋಕ ಹಟ್ಟಿ, ಶಿವಾನಂದ ಗುಂಡಿ, ಸೋಮವಾರ ಪೇಟ ದೈವ ಮಂಡಳಿ, ರೈತರ ಮತ್ತು ಗೌಡರ ದೈವ ಮಂಡಳಿ, ಆದಿ ಬಣಜಿಗ ಸಮಾಜ ಬಾಂಧವರ ಹಿರಿಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

loading...