ಚುನಾವಣೆ ಮುಗಿದ ಬಳಿಕ ಸಂಪುಟ ವಿಸ್ತರಣೆ

0
0
loading...

ಬೆಂಗಳೂರು:ದಸರಾ ಉತ್ಸವವನ್ನು ಸಂಭ್ರಮದಿಂದ, ಸುರಕ್ಷಿತವಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಡಿಸಿಎಂ ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದ ಗೃಹ ಕಚೇರಿಯಲ್ಲಿ ಮಾತನಾಡಿದ ಅವರು,ದಸರಾ ಉದ್ಟಾಟನೆಯಲ್ಲಿ ಕಾಂಗ್ರೆಸ್ ನಾಯಕರ ಗೈರಿನ ಬಗ್ಗೆ ಮಾಹಿತಿ ಇಲ್ಲ.ಅ.14,18,19 ರಂದು ನಾನು ಭಾಗವಹಿಸುವೆ ಎಂದರು.
ದಸರಾಗೆ ಜಿಲ್ಲೆಯ ಶಾಸಕರು,ಸಚಿವರು ಹೋಗಬೇಕು ಅಂತ ಇದೆ. ಕೆಲವರು ಹೋಗಿಲ್ಲ ಎಂಬ ಮಾಹಿತಿ ಬಂದಿದೆ.ಇದರಿಂದ ಏನು ಗೊಂದಲ ಇಲ್ಲ.ಲೋಕಸಭಾ ಉಪ ಚುನಾವಣೆ ವಿಚಾರ ಮಾತನಾಡಿ,3ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆ ನಡೆಯುತ್ತಿದೆ.ಮೈತ್ರಿ ಹಿನ್ನೆಲೆಯಲ್ಲಿ ಎಲ್ಲೆಲ್ಲಿ ಅಭ್ಯರ್ಥಿ ಹಾಕಬೇಕು ಅಂತ ಚರ್ಚೆ ನಡೆಯುತ್ತಿದ್ದು,ಮುಂದಿನ 2ದಿನಗಳಲ್ಲಿ ಅಂತಿಮ ತೀರ್ಮಾನ ಆಗಲಿದೆ ಎಂದರು.
ಇನ್ನು ಸಂಪುಟ ವಿಸ್ತರಣೆ ವಿಚಾರ ಪ್ರಸ್ತಾಪಿಸಿ, ಬಿಜೆಪಿ ಕಾಯ್ದರೂ ಪ್ರಯೋಜನವಿಲ್ಲ.ಸಂಪುಟ ವಿಸ್ತರಣೆ ವಿಳಂಬದ ಲಾಭ ಪ್ರತಿಪಕ್ಷಕ್ಕೆ ಸಿಗಲ್ಲ.ನಾವು ಚುನಾವಣೆ ಮುಗಿದ ಬಳಿಕ ಸಂಪುಟ ವಿಸ್ತರಣೆ ಪಕ್ಕಾ ಆಗಲಿದೆ ಎಂದರು.
ಎಸಿಬಿಯಿಂದ ಅಧಿಕಾರಿಗಳಿಬ್ಬರ ಮೇಲೆ ದಾಳಿ ವಿಚಾರ ಮಾತನಾಡಿ,ಈ ಬಗ್ಗೆ ವರದಿ ಕೇಳಿದ್ದೀನಿ.ಅಮಾನತಿನ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡಲಾಗುತ್ತದೆ.ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಗಾಳ ಹಾಕಲು ನಿರಂತರ ಪ್ರಯತ್ನ ಮಾಡುತ್ತಿದೆ. ಆದರೆ ಪ್ರಯತ್ನ ಸಫಲ ಆಗಲ್ಲ. ನಮ್ಮ ಶಾಸಕರು ಕರೆದಾಕ್ಷಣ ಹೋಗುವ ಸ್ಥಿತಿಯಲ್ಲಿ ಇಲ್ಲ ಎಂದರು.

loading...