ಧಾರ್ಮಿಕ ಆಚರಣೆಗಳಿಂದ ಸಮಾಜದಲ್ಲಿ ಶಾಂತಿ; ಮಾಜಿ ಶಾಸಕ ಸಂಜಯ

0
0
loading...

ಧಾರ್ಮಿಕ ಆಚರಣೆಗಳಿಂದ ಸಮಾಜದಲ್ಲಿ ಶಾಂತಿ; ಮಾಜಿ ಶಾಸಕ ಸಂಜಯ

ಕನ್ನಡಮ್ಮ ಸುದ್ದಿ-ಬೆಳಗಾವಿ: ದುರ್ಗಾಮಾತಾ ದೌಡ್ಂತಹ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರಿಂದ ಸಮಾಜದಲ್ಲಿ ಶಾಂತಿ,ಪ್ರೀತಿ ಕೂಡಿರುತ್ತದೆ ಎಂದು ಮಾಜಿ ಶಾಸಕ ಸಂಜಯ ಪಾಟೀಲ ಹೇಳಿದರು.

ಗ್ರಾಮೀಣ ಮತಕ್ಷೇತ್ರದ ನಿಲಜಿ ಗ್ರಾಮದಲ್ಲಿ ನವರಾತ್ರಿಯ ಅಂಗವಾಗಿ ದುರ್ಗಾಮಾತೆಯ ಮೂರ್ತಿ ಪ್ರತಿಷ್ಟಾಪನೆ ಹಾಗೂ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದೂ ಪರಂಪರೆಯ ನವರಾತ್ರಿಯ ಈ ಹಬ್ಬವು ನಾಡಿನಲ್ಲೆಡೆ ಅತೀ ಉತ್ಸಾಹದಿಂದ ಆಚರಿಸಲ್ಪಡುತ್ತಿದ್ದು, ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸುವುದರಿಂದ ಎಲ್ಲರಲ್ಲಿಯೂ ಪ್ರೀತಿ, ಉತ್ಸಾಹ, ಏಕತೆ ವೃದ್ಧಿಯಾಗುತ್ತದೆ, ಆದ್ದರಿಂದ ಎಲ್ಲರೂ ಜಗಳ, ದ್ವೇಷ, ಅಸೂಯೆಗಳನ್ನು ತೊರೆದು ಎಲ್ಲರೂ ಏಕತೆಯಿಂದ ಬಾಳೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಮಹಾಪೌರರಾದ ಶಿವಾಜಿ ಸುಂಠಕರ, ಧನಂಜಯ ಜಾಧವ, ರವಿ ಕೊಟಬಾಗಿ, ಸುನೀಲ ಅಷ್ಟೇಕರ, ವಸಂತ ಪಾಟೀಲ, ಭರಮಾ ಗೋಮನ್ನಾಚೆ, ವಿಠ್ಠಲ ಪಾಟೀಲ, ಕಿರಣ ಪಾಟೀಲ, ಸಾಗರ ಶೇರೆಕರ, ಸಂದೀಪ ನಿಲಜಕರ ಹಾಗೂ ಗ್ರಾಮಸ್ತರು ಪಾಲ್ಗೊಂಡಿದ್ದರು.

loading...