ನಿಲ್ಲದ ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ

0
9
loading...

ನವದೆಹಲಿ: ಕೇಂದ್ರ ಸರ್ಕಾರ ತನ್ನ ಪಾಲಿನಿಂದ ಪ್ರತಿಲೀಟರ್ಗೆ 2.50 ರೂ. ಕಡಿಮೆ ಏನೋ ಮಾಡಿತು. ಇಲ್ಲಿಂದೀಚೆಗೆ ನಿತ್ಯವೂ 10-30 ಪೈಸೆಯಷ್ಟು ಏರಿಕೆ ಆಗುತ್ತಲೇ ಬಂದಿದೆ. ಇಂದೂ ಕೂಡಾ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತಿಲೀಟರ್ ಪೆಟ್ರೋಲ್ಗೆ 18 ಪೈಸೆ ಏರಿಕೆಯಾದರೆ, ಈ ಪ್ರಮಾಣ ಬೆಂಗಳೂರಲ್ಲಿ 12 ಪೈಸೆಯಾಗಿದೆ. ಇನ್ನು ಡೀಸೆಲ್ ನವದೆಹಲಿ ಹಾಗೂ ಬೆಂಗಳೂರಲ್ಲಿ ತಲಾ 29 ಪೈಸೆ ಏರಿಕೆಯಾಗಿದೆ.
ನಿತ್ಯ ಬೆಲೆ ಏರಿಕೆಯಾಗುವ ಮೂಲಕ ಗ್ರಾಹಕನ ಜೇಬಿನಿಂದ ಸೋರಿಕೆಯಾಗುತ್ತಲೇ ಇದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಪ್ರತಿಲೀಟರ್ಗೆ 18 ಪೈಸೆ ಏರಿಕೆಯಾಗಿ, 88.12 ರೂ. ಗೆ ತಲುಪಿದೆ. ಇನ್ನು ಡೀಸೆಲ್ ಪ್ರತಿಲೀಟರ್ಗೆ 78.82 ಪೈಸೆಗೆ ಏರಿಕೆಯಾಗಿದೆ.
ಬೆಂಗಳೂರನಲ್ಲಿ ಪ್ರತಿಲೀಟರ್ಗೆ 12 ಪೈಸೆಯಷ್ಟು ಏರಿಕೆ ಕಾಣುವ ಮೂಲಕ 83.13ರೂ. ಗೆ ತಲುಪಿದೆ. ಮತ್ತೊಂದೆಡೆ ಡೀಸೆಲ್ ಬೆಲೆ 29ಪೈಸೆ ಏರಿಕೆಯಾಗುವ ಮೂಲಕ 75.58 ರೂ.ಗೆ ಹೆಚ್ಚಳವಾಗಿದೆ.

loading...