ಪರಮೇಶ್ವರ್ ಕಂಡಾಕ್ಷಣ ಗಳಗಳನೇ ಅತ್ತ ಮಹಿಳೆ

0
0
loading...

ಬೆಂಗಳೂರು:ಉಪ ಮುಖ್ಯಮಂತ್ರಿ ಪರಮೇಶ್ವರ್‍ರನ್ನು ಕಂಡಾಕ್ಷಣ ಪಕ್ಷದ ಕಾರ್ಯಕರ್ತೆಯೊಬ್ಬರು ಗಳಗಳನೆ ಅಳುತ್ತಾ ದೂರೊಂದನ್ನು ಸಲ್ಲಿಕೆ ಮಾಡಿದರು.
ಬೆಂಗಳೂರಿನ ಸದಾಶಿವನಗರದ ಗೃಹ ಕಚೇರಿಯಲ್ಲಿ ಉಪ ಮುಖ್ಯಮಂತ್ರಿ ಪರಮೇಶ್ವರ್‍ರನ್ನು ಭೇಟಿ ಮಾಡಿದ ಕಾರ್ಯಕರ್ತೆ, ನನ್ನನ್ನು ಮತ್ತು ನನ್ನ ಮಗಳನ್ನ ಸುಳ್ಳು ಕೇಸ್‍ನಲ್ಲಿ ಸಿಲುಕಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ಸ್ಪಂದನಾ ಫೌಂಡೇಶನ್ ಮುಖ್ಯಸ್ಥೆ ಹಾಗೂ ಕಾಂಗ್ರೆಸ್ ಕಾರ್ಯಕರ್ತೆ ವೀಣಾ,ಡಿಸಿಎಂಪರಮೇಶ್ವರ್ ಬಳಿ ಅಳಲು ತೋಡಿಕೊಂಡ ಮಹಿಳೆ. ಅವ್ಯವಹಾರ ಆರೋಪದಡಿ ಈ ಹಿಂದೆ ವೀಣಾ ಬಂಧನವಾಗಿತ್ತು.
ಇದೇ ವೇಳೆ ಮಗಳ ವಿರುದ್ಧ ವೇಶ್ಯಾವಾಟಿಕೆ ನಡೆಸುವ ಆರೋಪದಡಿಯಲ್ಲಿ ಕೇಸ್ ದಾಖಲಿಸುವ ಬೆದರಿಕೆಯನ್ನು ಸಿಸಿಬಿ ಅಧಿಕಾರಿಯೊಬ್ಬರು ಹಾಕಿದ್ದರು ಎಂದು ವೀಣಾ ದೂರಿದರು.
ಸಿಸಿಬಿ ಅಧಿಕಾರಿಗಳಿಬ್ಬರಿಂದ ಕಿರುಕುಳ ಉಂಟಾಗುತ್ತಿದೆ.2ಕೋಟಿ ಹಣ ಕೊಡುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ದೂರಿದರು. ಮನವಿ ಆಲಿಸಿದ ಪರಮೇಶ್ವರ್, ಈ ಸಂಬಂಧ ಅಧಿಕಾರಿಗಳ ಜತೆ ಚರ್ಚಿಸುವುದಾಗಿ ಭರವಸೆ ಇತ್ತರು.

loading...