ಪುರಸಭೆ ನಿರ್ಲಕ್ಷ: ಚರಂಡಿ ನೀರು ರಸ್ತೆಗೆ

0
0
Exif_JPEG_420
ಕನ್ನಡಮ್ಮ ಸುದ್ದಿ-ತೇರದಾಳ: ತುಂಬಿದ ಚರಂಡಿಯನ್ನು ಸ್ವಚ್ಛಗೊಳಿಸದ ಪುರಸಭೆಯ ನಿರ್ಲಕ್ಷö್ಯದಿಂದ ಕೊಳಚೆ ನೀರು ರಸ್ತೆ ಮೇಲೆ ಹರಿದು ಹೋಗುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಅಡ್ಡಾಡುತ್ತಿರುವ ಸ್ಥಿತಿ ಪಟ್ಟಣದ ತೇರದಾಳ-ಹಿಡಕಲ್ ರಸ್ತೆಯಲ್ಲಿ ನಿರ್ಮಾಣವಾಗಿದೆ.
ವಾರ್ಡ್ ಸಂಖ್ಯೆ ೧೯ರ ವ್ಯಾಪ್ತಿಯಲ್ಲಿ ಬರುವ ಈ ಸಮಸ್ಯೆಯಿಂದ ಆ ಮಾರ್ಗದಿಂದ ತಮ್ಮ ತೋಟದ ವಸ್ತಿಗೆ ಹೊರಡುವ ರೈತಾಪಿ ವರ್ಗದ ಜನರು ಮೂಗು ಮುಚ್ಚಿಕೊಂಡು ಅಡ್ಡಾಡುವ ಸ್ಥಿತಿ ನಿರ್ಮಾಣವಾಗಿದೆ. ಬೈಕ್ ಸೇರಿದಂತೆ ಇತರ ವಾಹನದಾರರು ಹೇಗೊ ಸಲೀಸಾಗಿ ದಾಟಿಕೊಂಡು ಹೋಗುತ್ತಾರೆ ಆದರೆ ಪಾದಚಾರಿಗಳು ಹೇಗೆ ಅಡ್ಡಾಡಬೇಕೆಂಬುದು ಇಲ್ಲಿನವರ ಪ್ರಶ್ನೆ. ಈ ವಿಷಯವನ್ನು ಪುರಸಭೆಯವರ ಗಮನಕ್ಕೆ ತರಲಾಗಿ ಅವರು ರಸ್ತೆಗೆ ಅಳವಡಿಸಿದ್ದ ಪೈಪ್‌ನ್ನು ಜೆಸಿಬಿ ಮೂಲಕ ಕಿತ್ತು ಹಾಕಿದರು ಕೂಡ ಕೊಳಚೆ ನೀರು ಮುಂದೆ ಹರಿದು ಹೋಗಲಿಲ್ಲ.

loading...

ಪುರಸಭೆಯವರು ತಮ್ಮ ಬೇಜವಾಬ್ದಾರಿಯಿಂದ ಚರಂಡಿ ಪೂರ್ತಿ ತುಂಬುವವರೆಗೆ ಸುಮ್ಮನಿದ್ದು, ಅನಂತರ ಕಾರ್ಯತತ್ಪರಾಗುತ್ತಾರೆ. ನೀರು ಹರಿದು ಹೋಗದಿದ್ದಾಗ ಪೈಪ್ ತೆಗೆದು ಹಾಕಿ ಸಂಚಾರಕ್ಕೆ ಮತ್ತಷ್ಟು ತೊಂದರೆ ಕೊಡುತ್ತಾರೆಯೇ ವಿನಃ ಬೇಗನೆ ಕೈಗೆತ್ತಿಕೊಂಡ ಕೆಲಸ ಮುಗಿಸಬೇಕೆಂಬ ಸಾರ್ವಜನಿಕರ ಕಾಳಜಿಯ ಕೊರತೆಯನ್ನು ಪ್ರದರ್ಶಿಸುತ್ತಾರೆ. ಅಗೆದ ಜಾಗವನ್ನು ಹಾಗೆಯೇ ಬಿಟ್ಟು ಬೇರೆ ಕೆಲಸದತ್ತ ಇವರು ಹೊರಟು ಹೋಗುತ್ತಾರೆ. ಇದರಿಂದ ಬಹಳ ದಿನದವರೆಗೆ ಅಲ್ಲಿಯೇ ನಿಂತ ಕೊಳಚೆ ನೀರು ರೋಗಗಳ ತಾಣವಾಗಿ, ಸ್ಥಳೀಯರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಆರಂಭವಾಗಿದೆ.
ಹೀಗಾಗಿ ಪಟ್ಟಣದ ಇಂತಹ ನೂರಾರು ಸಮಸ್ಯೆಗಳನ್ನು ಅನುಭವಿಸುತ್ತ ಸುಮ್ಮನಿದ್ದಾರೆ. ಆದರೂ ವಾರ್ಡ್ ನಂಬರ್ ೧೯ರ ಚುನಾಯಿತ ಪ್ರತಿನಿಧಿ ಸಂತೋಷ ಜಮಖಂಡಿಯವರು ಈ ಕೊಳಚೆ ನೀರು ಸಾಗಿಸಲು ಪುರಸಭೆ ಸಿಬ್ಬಂದಿಯೊಂದಿಗೆ ಕೈಜೋಡಿಸಿದ್ದು ಕಂಡುಬಂದಿತು. ಒಟ್ಟಾರೆ ಪುರಸಭೆಯ ನಿರ್ಲಕ್ಷö್ಯತನ ಮಾತ್ರ ಪಟ್ಟಣದ ಸಾಮಾನ್ಯ ಸಮಸ್ಯೆಯನ್ನು ಬಗೆಹರಿಸದೇ ಅದು ದೊಡ್ಡದಾಗುವವರೆಗೆ ಕಾದು ಕುಳಿತು ಅನಂತರ ಪೇಚಾಟಕ್ಕೆ ಸಿಲುಕುವುದು ಸಾಮಾನ್ಯವಾಗಿದೆ.

loading...