ಬಸವನಬಾಗೇವಾಡಿಯ ಭರ್ಜರಿ ಮೇಕೆ-ಕುರಿ ಸಂತೆ

0
0
loading...

 

ಗುರುರಾಜ ಕನ್ನೂರ
ಬಸವನಬಾಗೇವಾಡಿ: ಬಸವನಬಾಗೇವಾಡಿ ವಿಶ್ವಗುರು ಬಸವಣ್ಣನವರ ಹುಟ್ಟೂರಿನ ಪ್ರಸಿದ್ಧಿಯೊಂದಿಗೆ ಪ್ರತಿ ಸೋಮವಾರ ನಡೆಯುವ ಮೇಕೆ-ಕುರಿ ಸಂತೆಯಿಂದಲೂ ಹೆಸರುವಾಸಿಯಾಗಿದೆ. ಮುದ್ದೆÃಬಿಹಾಳ- ವಿಜಯಪುರ ಜಿಲ್ಲಾ ಕೇಂದ್ರಕ್ಕೆ ತೆರಳುವ ಮುಖ್ಯರಸ್ತೆಯ ಪಕ್ಕದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ೧೩ ಎಕರೆಯ ಉಪ ಮಾರುಕಟ್ಟೆಯ ಪ್ರಾಂಗಣದಲ್ಲಿ ಬೆಳಿಗ್ಗೆ ೬ ಗಂಟೆಯಿಂದಲೇ ೫ರಿಂದ ೬ ತಾಸಿನವರೆಗೆ ಕಳೆದ ೩೨ ವರ್ಷಗಳಿಂದ ಅದ್ದೂರಿಯಾಗಿ ನಡೆಯುತ್ತದೆ.

ತಾಲೂಕಿನ ಬಹುತೇಕ ಹಳ್ಳಿಗಳ ಜಿಲ್ಲೆಯ ಮುದ್ದೆÃಬಿಹಾಳ, ಇಂಡಿ, ವಿಜಯಪುರ, ಸಿಂದಗಿ ಸೇರಿದಂತೆ ಅವಳಿ ಬಾಗಲಕೋಟೆ ಜಿಲ್ಲೆಯಿಂದಲೂ ಬೆಳಗಿನ ಜಾವದಿಂದಲೇ, ಕುರಿ, ಮೇಕೆ,ಹೋತ,ಟಗರುಗಳನ್ನು ಮಿನಿಲಾರಿ,ಟಂಟಂ, ಮಹೇಂದ್ರ ಅಟೋರಿಕ್ಷಾಗಳಲ್ಲಿ ಹೇರಿಕೊಂಡು ವ್ಯಾಪಾರಕ್ಕೆ ಬರುತ್ತಾರೆ.
ಬೆಳಿಗ್ಗೆ ೭:೩೦ರ ಸುಮಾರಿಗೆ ವ್ಯಾಪಾರ ಆರಂಭಗೊಂಡು ೧೦ ರ ನಂತರ ತಾರಕ್ಕಕ್ಕೆÃರಿರುತ್ತದೆ. ಕುರಿ ಹೊತ್ತ ವಾಹನಗಳು ಸಂತೆ ಜಾಗಕ್ಕೆ ಬರುವುದೇ ತಡ ವ್ಯಾಪಾರಿಗಳು, ದಲ್ಲಾಳಿಗಳು ಮುಗಿಬೀಳುತ್ತಾರೆ. ಕುರಿ ಅಥವಾ ಮೇಕೆಯ ಗಾತ್ರ, ಎತ್ತರ ಆದರಿಸಿ ದರ ಸಮರ ಆರಂಭವಾಗುತ್ತದೆ. ವ್ಯಾಪಾರ ಕುದಿರಿದ ನಂತರ ಆ ಮೇಕೆ, ಕುರಿಗಳಿಗೆ ಚಾಕುವಿನಿಂದ ಕೂದಲು ಕೊಯ್ದು ಗುರುತು ಮಾಡುತ್ತಾರೆ. ಅದರ ಹಿಂದೆಯೇ ಕೆಲವರು ಅವನ್ನು ಒಯ್ದು ಬೇರೆಡೆ ಸಾಗಿಸುವ ಷಿಪ್ ವ್ಯಾನ್‌ಗಳಿಗೆ ತುಂಬುತ್ತಾರೆ.

ವ್ಯಾಪಾರವಾದ ಕುರಿಗಳನ್ನು ಬೇರೆಡೆ ಸಾಗಿಸಲು ಸಜ್ಜಾದ ೧೦-೨೦ ಷಿಪ್ ವ್ಯಾನಗಳು, ಗೂಡ್ಸ÷ಗಳು ಬೆಂಗಳೂರು, ಮೈಸೂರು, ತಮಿಳುನಾಡು, ದಾವಣಗೆರೆ, ಚಿತ್ರದುರ್ಗ ಕಡೆ ಸಾಗುತ್ತವೆ. ಸಂತೆಯ ದಿನ ಇಲ್ಲಿ ಕೃಷಿಗೆ ಪೂರಕವಾದ, ಪ್ಲಾಸ್ಟಿಕ್ ಹಾಳಿ, ಹಗ್ಗ, ಕಂಬಳಿ, ಕೊಡಲಿ, ಕುಡಗೋಲು ಸೇರಿದಂತೆ ಕೃಷಿ ಪರಿಕರಗಳು ಮಾರಾಟಕ್ಕೆ ಇರುತ್ತವೆ. ಸಂಚಾರಿ ಹೊಟೆಲ್‌ಗಳು, ತಂಪು ಪಾನೀಯ ಅಂಗಡಿಗಳ ಜೊತೆಗೆ ಮೂಲಭೂತ ಸೌರ‍್ಯಗಳಾದ ಕುಡಿಯುವ ನೀರಿನ ಹಾಗೂ ವಿದ್ಯುತ್ ಸರಬರಾಜಿನ ವ್ಯವಸ್ಥೆ ಮಾಡಲಾಗಿರುತ್ತದೆ.

ಒಟ್ಟಿನಲ್ಲಿ ರಾಜ್ಯದಲ್ಲಿಯೇ ಅತೀ ಹೆಚ್ಚು ಕುರಿ ಜಮಾಯಿಸಿ ಮಾರಾಟ ಮಾಡುವ ಪ್ರಕ್ರಿಯೆ ಇಲ್ಲಿ ನಡೆಯುತ್ತದೆ.

loading...