ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ರೈತರ ಆಸ್ತಿ: ಶಾಸಕ ಯಶವಂತ್ರಾಯಗೌಡ

0
0
loading...

ಇಂಡಿ: ತಾಲೂಕಿನ ಮರಗೂರ ಗ್ರಾಮದಲ್ಲಿ ಸ್ಥಾಪನೆಗೊಂಡಿದ್ದ ಭೀಮಾಶಂಕರ ಸಕ್ಕರೆ ಕಾರ್ಖಾನೆಯು ಹಲವಾರು ದಶಕದಿಂದ ನೆನೆಗುದಿಗೆ ಬಿದ್ದಿದ್ದ ಈ ಕಾರ್ಖಾನೆಯನ್ನು ಪ್ರಾರಂಭಿಸಿದ್ದೆÃನೆ. ಇದು ಇಂಡಿ-ಸಿಂದಗಿ ತಾಲೂಕಿನ ರೈತರ ಆಸ್ತಿಯನ್ನಾಗಿ ಮಾಡಿದ್ದೆÃನೆ ಎಂದು ಶಾಸಕ ಯಶವಂತ್ರಾಯಗೌಡ ಪಾಟೀಲ ಹೇಳಿದರು.
ಅವರು ತಾಲೂಕಿನ ಮರಗೂರ ಗ್ರಾಮದ ಭೀಮಾಶಂಕರ ಸಹಕಾರಿ ಸಕ್ಕರೇ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಬಾಯ್ಲರ್ ಪ್ರತಿಪಾದನಾ ಸಮಾರಂಭದಲ್ಲಿ ವಿಶೇಷ ಹೋಮ ಕಾರ್ಯಕ್ರಮ ನೇರವೇರಿಸಿ ಅವರು ಮಾತನಾಡಿದರು.

ಕಾರ್ಖಾನೆ ಹೊಸದಾಗಿ ಪ್ರಾರಂಭಿಸಿದರೂ ರೈತರ ಕಬ್ಬಿನ ಬೆಳೆಗೆ ಪ್ರತಿ ಟನ್‌ಗೆ ೨೪೦೦ ರೂ.ಗಳು ನೀಡಲಾಗಿದೆ. ಆದರೆ ೧೪೫ ಕೋಟಿ ರೂ. ಕಾರ್ಖಾನೆ ಸಾಲದ ಭಾರದಲ್ಲಿರುವುದರಿಂದ ಈ ಬಾರಿ ರೈತರ ಹಿಂದಿನಂತೆ ನೀರಿಕ್ಷೆ ಮಾಡುವುದು ಬೇಡ. ಕಾರ್ಖಾನೆಯ ಉಳಿಸುವ ಜವಾಬ್ದಾರಿ ನಿಮ್ಮೆÃಲ್ಲರ ಮೇಲಿದೆ ಎಂದರು.
ಈ ಕಾರ್ಖಾನೆ ಒಟ್ಟು ೧೮೧ ಎಕರೆ ಪ್ರದೇಶದಲ್ಲಿ ತಲೆ ಎತ್ತಿದ್ದು.೧೪ ಮೇಗಾವ್ಯಾಟ್ ವಿದ್ಯುತ್ ತಯಾರಿಸಿ ಅದರಲ್ಲಿ ೯ ಮೇಗಾವ್ಯಾಟ್‌ನ್ನು ಹೆಸ್ಕಾಂಗೆ, ಉಳಿದಿದ್ದನ್ನು ಕಾರ್ಖಾನೆಗೆ ಉಪಯೋಗಿಸುತ್ತಿದೆ.

ವಿಶೇಷ ಹೋಮ ಪೂಜೆಯ ಕಾರ್ಯಕ್ರಮದಲ್ಲಿ ವಿಶ್ವನಾಥ ಹಿರೇಮಠ ಸ್ವಾಮೀಜಿಯವರು ಸಾನಿಧ್ಯವಹಿಸಿದ್ದರು, ಕಾರ್ಖಾನೆಯ ವ್ಯವಸ್ಥಾಪಕ ಅಶೋಕ ಮುರಬ, ವಿಶೇಷ ಅಧಿಕಾರಿ ಎಂ.ಡಿ. ಮಲ್ಲೂರ, ಜಿ.ಪಂ ಸದಸ್ಯ ಶಿವಯೋಗೆಪ್ಪ ನೇದಲಗಿ, ಎಪಿಎಂಸಿ ಅಧ್ಯಕ್ಷ ಶಿವಯೋಗೇಪ್ಪ ಚನಗೊಂಡ, ಮಹಾಧೇವ ಗಡ್ಡದ, ಜಗದೀಶ ಕ್ಷತ್ರಿ, ಬಿ.ಏಮ ಕೋರೆ, ರಮೇಶ ಗುತ್ತೆÃದಾರ, ಇಲಿಯಾಸ್ ಬೋರಾಮನಿ, ಕಲ್ಲಣ್ಣಗೌಡ ಬಿರಾದಾರ, ಸತ್ತಾರ ಬಾಗವಾನ, ಭೀಮಣ್ಣ ಕೌಲಗಿ, ಜಾವೇದ ಮೋಮಿನ, ಲಿಂಬಾಜಿ ರಾಠೋಡ, ಸುಭಾಸ ಬಾಬರ ಮತ್ತಿತ್ತರು ಇದ್ದರು.

loading...