ಮಂಡಿ ಶಸ್ತ್ರಚಿಕಿತ್ಸೆಯಲ್ಲಿ ಯಶಸ್ವಿಯಾದ ಫೋರ್ಟಿಸ್ ಆಸ್ಪತ್ರೆ ವೈದ್ಯರು

0
0
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಎರಡು ವರ್ಷಗಳಿಂದ ಚಲನೆಯಿಲ್ಲದೆ ಬಳಲುತ್ತಿದ್ದ ೪೦ ವರ್ಷ ವಯಸ್ಸಿನ ರೋಗಿಯೊಬ್ಬರು ಬೆಂಗಳೂರಿನ ಬನ್ನೆರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಕಂಪ್ಯೂಟರ್ ನ್ಯಾವಿಗೇಷನ್ ಅಸಿಸ್ಟೆಡ್ ಟೋಟಲ್ ನೀ ರಿಪ್ಲೆಸ್‌ಮೆಂಟ್(ಟಿಕೆಆರ್) ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಶಸ್ತ್ರಚಿಕಿತ್ಸೆಯಲ್ಲಿ ವೈದ್ಯರ ತಂಡದ ನೇತೃತ್ವವನ್ನು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಮೂಳೆರೋಗ ಶಸ್ತ್ರ ವಿಭಾಗದ ನಿರ್ದೇಶಕರಾದ ಡಾ. ನಾರಾಯಣ ಹುಲ್ಸೆ ಅವರು ವಹಿಸಿದ್ದರು. ಕಳೆದ ಏಳು ವರ್ಷಗಳಿಂದ ರೋಗಿ ಬಹುಕೀಲುಗಳ ಸಂಧಿವಾತದಿಂದ ಬಳಲುತ್ತಿದ್ದು, ಇದರಿಂದಾಗಿ ಆಕೆ ತೀವ್ರ ರೀತಿಯ ಕೀಲುನೋವಿನಿಂದ ಬಳಲುತ್ತಿದ್ದರು. ಇಂತಹ ರೋಗಿಯ ಮಂಡಿ ಜೋಡನೆ ಶಸ್ತ್ರ ಚಿಕಿತ್ಸೆ ಮಾಡುವಲ್ಲಿ ಫೋರ್ಟಿಸ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ ಎಂದು ಆಸ್ಪತ್ರೆಯ ಮೂಳೆರೋಗ ಶಾಸ್ತç ವಿಭಾಗದ ಹೆಚ್ಚುವರಿ ನಿರ್ದೇಶಕರಾದ ಡಾ. ನಾರಾಯಣ ಹುಲ್ಸೆ ತಿಳಿಸಿದ್ದಾರೆ.

loading...