ಮಾಧವಾನಂದ ಪ್ರಭು ದೇಶದ ಮಹಾಶಕ್ತಿ

0
0
loading...

ಅರಟಾಳ: ಮಹಾತ್ಮ ಗಾಂಧಿಜೀಯವರ ಜೋತೆಗೆ ಇಂಚಗೇರಿ ಸಂಪ್ರದಾಯದ ಮಾಧವಾನಂದರು ತಮ್ಮ ಅನುಯಾಯಿಗಳನ್ನು ಒಗ್ಗೂಡಿಸಿಕೊಂಡು ಭಾರತ ಸ್ವಾತಂತ್ರö್ಯಕ್ಕಾಗಿ ಹೋರಾಡಿದ ಸ್ವಾತಂತ್ರ ಹೋರಾಟಗಾರರು. ಕರ್ನಾಟಕ ಏಕೀಕರಣ, ಗೋವಾ ಚಳುವಳಿ, ರೈತ ಕುಲಿಕಾರರ ಸಮಸ್ಯಗಳಿಗೆ ಸ್ಪಂದಿಸಿ ಸುಂದರಭಾರತ ನಿರ್ಮಿಸಿದರು ಎಂದು ಇಂಚಗೇರಿ ಮಠದ ಶಂಕರೇಪ್ಪ ಮಹಾರಾಜರು ಹೇಳಿದರು.
ರವಿವಾರ ಗ್ರಾಮಕ್ಕೆ ಆಗಮಿಸಿದ ಮಾಧವಾನಂದ ಪ್ರಭೂಜಿಯವರ ೧೦೩ ನೇ ಜಯಂತಿ ನಿಮಿತ್ಯ ಮಾಧವ ರಥೋತ್ಸವ ಮತ್ತು ಭಾವೈಕ್ಯತಾ ಸರ್ವಧರ್ಮ ಸತ್ಸಂಗ ಪಾದಯಾತ್ರೆಯನ್ನು ಉದ್ದೆÃಶಿಸಿ ಮಾತನಾಡಿದ ಅವರು, ಇಂಚಗೇರಿ ಮಠದ ಶ್ರಿÃ ಮಾಧವಾನಂದ ಪ್ರಭೂಜಿಯವರು ಭಾರತದೇಶದ ಮಹಾಶಕ್ತಿ.

ಅವರು ಬಡವರ ಬಂಧು, ಅನಾಥರಿಗೆ ಆಶ್ರಯ ನೀಡಿದ ಆಪ್ತಭಾಂದವ, ಕಷ್ಟ ಸುಖದಲ್ಲಿ ಭಾಗಿಯಾದ ಸದ್ಗುರುನಾಥ. ೨೨ ಸಾವಿರಕ್ಕೂ ಹೆಚ್ಚು ಅಂತರಜಾತಿ ವಿವಾಹ ಮಾಡಿದ ಕೀರ್ತಿ ಮಾಧವಾನಂದರಿಗೆ ಸಲುತ್ತದೆ. ಮದÀ್ಯಪಾನ, ಗೋಹತ್ಯಾ ನಿಷೇಧಕ್ಕಾಗಿ ದೇಶದ್ಯಂತ ಪಾದಯಾತ್ರೆ ನಡೆಸಿ ಜನರನ್ನು ಸಂಘಟಿಸಿ ಹೋರಾಟ ಮಾಡಿದರು.

ಸಿದ್ಧಾರೂಡ ಆಶ್ರಮದ ಶಿವಪುತ್ರ ಶಿವಯೋಗಿ, ಸುಭಾಸ ಇಂಚಗೇರಿಮಠ, ಗುಲ್ಬರ್ಗಾದ ನಾಗಪ್ಪ ಮಹಾರಾಜರು, ಶೇಟೇಪ್ಪ ಮಹಾರಾಜರು, ಮಹಾದೇವ ಮಾಡಗ್ಯಾಳ, ನಿಂಗಪ್ಪ ಕುಂಬಾರ, ಪ್ರಲಾದ ದಮಡಿ, ಶಿವಲಿಂಗಪ್ಪ ಜಂಬಗಿ, ಗಿರಮಲ್ಲ ಮಾಳಿ, ಸಂಗಪ್ಪ ಕುಂಬಾರ, ಎಸ್ ಎಸ್. ಮಾಳಿ, ಭೀಮು ಮಾಳಿ, ದುರ್ಗಪ್ಪ ವಡ್ಡರ ಹಾಗೂ ಗ್ರಾಮಸ್ಥರು ಇದ್ದರು.

loading...