ಮೂರು ಜಿಲ್ಲೆಗಳಲ್ಲಿ ಕಮಲ ಅರಳುವುದು ಗ್ಯಾರಂಟಿ

0
2
loading...

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ, ಬೀದರ್ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಈ ಬಾರಿ ಕಮಲ ಅರಳುವುದು ಗ್ಯಾರಂಟಿ ಎಂದು ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್ ಭವಿಷ್ಯ ನುಡಿದಿದ್ದಾರೆ.
ಕಲಬುಗಿಯಲ್ಲಿ ಮಾತನಾಡಿದ ಅವರು,ತಮಗೆ ಬೀದರ್,ಕಲಬುರಗಿ, ರಾಯಚೂರು ಜಿಲ್ಲೆಗಳ ಲೋಕಸಭಾ ಅಭ್ಯರ್ಥಿ ಗೆಲ್ಲಿಸುವ ಉಸ್ತುವಾರಿ ನೀಡಲಾಗಿದೆ.ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೈಗೊಂಡ ರಣತಂತ್ರ ಯಶಸ್ವಿಯಾಗಿದ್ದು,ಅದೇ ಮಾದರಿಯಲ್ಲಿ ಲೋಕಸಭಾ ಚುನಾವಣೆಗೆ ರಣತಂತ್ರ ರೂಪಿಸಿ 3 ಜಿಲ್ಲೆಯ ಸಂಸದ ಸ್ಥಾನದಲ್ಲಿ ಕಮಲ ಅರಳಿಸುವ ಸರ್ವ ತಯಾರಿ ಮಾಡಿ ಕೊಳ್ಳುತ್ತಿರುವದಾಗಿ ಹೇಳಿದರು.
ಕಲಬುರಗಿ ಕಾಂಗ್ರೆಸ್ ಸಂಸದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಯಾರನ್ನು ನಿಲ್ಲಿಸಲಿದ್ದೀರಿ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ದ ಗುತ್ತೇದಾರ್,ಖರ್ಗೆ ಒಬ್ಬ ಹಿರಿಯ ವ್ಯಕ್ತಿ. ರಾಜಕೀಯದಲ್ಲಿ ಪಳಗಿದವರು. ಅವರ ವಿರುದ್ಧ ನಿಲ್ಲಲು ಸರ್ವ ರೀತಿ ಸಶಕ್ತ ವ್ಯಕ್ತಿ ಗಳನ್ನು ಹುಡುಕಲಾಗಿದೆ.ಆದರೆ ಹೆಸರು ಬಹಿರಂಗಪಡಿಸುವುದಿಲ್ಲ.ಚುನಾವಣೆ ಸಮೀಪಿಸಿದಂತೆ ಪಕ್ಷದ ವರಿಷ್ಠರು ಅಭ್ಯರ್ಥಿಹೆಸರು ಘೋಷಣೆ ಮಾಡಲಿದ್ದಾರೆ.ತಮಗೆ ನೀಡಿದ ಮೂರು ಜಿಲ್ಲೆಗಳಲ್ಲಿ ಬಿಜೆಪಿ ಅರಳುವುದು ಖಂಡಿತ ಎಂದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

loading...