ಮೂಲ ಸೌಲಭ್ಯಗಳ ಕೊರತೆ: ಪ್ರಾಚಾರ್ಯರಿಗೆ ತರಾಟೆ

0
0
loading...

ಕನ್ನಡಮ್ಮ ಸುದ್ದಿ-ಗಂಗಾವತಿ: ಗಂಗಾವತಿ ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯವನ್ನು ನೀಡಲಾರದ ಪ್ರಾಚಾರ್ಯ ಹಸನ್ಮಿಯಾ ಅವರನ್ನು ಶ್ರೀಕೃಷ್ಣದೇವರಾಯ ವಿವಿ ಸೆನೆಟ್ ಸದಸ್ಯ, ಕೆಪಿಸಿಸಿ ಜಿಲ್ಲಾ ಪ್ರಚಾರ ಸಮಿತಿ ಸಂಚಾಲಕ ಬಸವರಾಜಸ್ವಾಮಿ ಮಳೇಮಠ ತರಾಟೆಗೆ ತೆಗದುಕೊಂಡ ಪ್ರಸಂಗ ನಡೆಯಿತು.
ಎಸ್‍ಎಫ್‍ಆಯ್ ಮತ್ತು ಎಬಿವಿಪಿ ಇನ್ನಿತರ ವಿಧ್ಯಾರ್ಥಿ ಸಂಘಟನೆಗಳ ಒತ್ತಾಯದ ಮೇರೆಗೆ ನಗರದ ಶ್ರೀ ಕೋಲ್ಲಿನಾಗೇಶ್ವರರಾವ್ ಗಂಗಾÀಧರಯ್ಯ ಕಾಲೇಜಿಗೆ ಭೇಟಿ ನೀಡಿದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಲೇಜಿನ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಮತ್ತು ಕೊಠಡಿಗಳಲ್ಲಿ ಅಳವಡಿಸಿರುವ ಪ್ರೊಜೆಕ್ಟರ್‍ಗಳ ಸಮರ್ಪಕ ಬಳಕೆಯಾಗದಿರುವುದು, ಕೆಲ ತರಗತಿಗಳಿಗೆ ಆಸನಗಳ ಕೊರತೆ ಮತ್ತು ಗ್ರಂಥಾಲಯ ವಿಭಾಗ, ಪಿಜಿ ತರಗತಿಗಳಿಗೆ ಕೊಠಡಿಗಳ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಪರದಾಡುತ್ತಿರುವುದು, ಕಾಲೇಜಿನ ಆವರಣದಲ್ಲಿ ಅಪೂರ್ಣವಾಗಿ ನಾಲ್ಕು ವರ್ಷಗಳಿಂದ ನಿರ್ಮಾಣ ಹಂತದಲ್ಲಿ ನಿಂತಿರುವ ವಿದ್ಯಾರ್ಥಿನಿಯರ ವಸತಿ ನಿಲಯದ ಕಟ್ಟಡ ಎಲ್ಲಾವನ್ನು ಪರಿಶೀಲಿಸಲಾಯಿತು. ಈ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಂಶುಪಾಲರಾದ ಹಸನ್ಮಿಯಾ ಅವರೊಂದಿಗೆ ವಿದ್ಯಾರ್ಥಿಗಳ ಒಡಗೂಡಿ ಚರ್ಚಿಸಲಾಯಿತು. ಹೆಚ್ಚಿನ ವಿಧ್ಯಾರ್ಥಿ ಮತ್ತು ಕಾಲೇಜಿನ ಉಪನ್ಯಾಸಕ ವರ್ಗದ ಸಮನ್ವಯಕ್ಕಾಗಿ ಮತ್ತು ಇನ್ನಿತರ ಕುಂದುಕೊರತೆಗಳ ನಿವಾರಣೆಗಾಗಿ ಮುಂಬರುವ ದಿನಗಳಲ್ಲಿ ಒಂದು ನಿರ್ಧಿಷ್ಟ ದಿನಾಂಕದಂದು ಈ ಭಾಗದ ಜನಪ್ರತಿನಿಧಿಗಳ ವಿಶ್ವವಿದ್ಯಾಲಯದ ಪ್ರತಿನಿಧಿಗಳ, ವಿಧ್ಯಾರ್ಥಿಗಳ ಮತ್ತು ಉಪನ್ಯಾಸಕ ವರ್ಗದ ಪ್ರಾಂಶುಪಾಲರು ಸಭೆ ಕರೆಯಲು ತಿರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡ ಅಮರೇಶ ಕಡಗದ, ಮಂಜುನಾಥ ವಗರನಾಳ ಸಂಜಯ ಸಿಂಗ್, ಮುರ್ತುಜ, ವಿರೇಶ, ಅನಿಲ್, ಪ್ರಮೋದ, ಮಂಜುನಾಥ, ಶ್ರೀಪಾದ, ಶ್ರೀಕಾಂತ, ಸುರೇಶ ಇದ್ದರು.

loading...